Site icon PowerTV

ಹಿಂದೂ ಮಹಾಗಣಪತಿ ಶೋಭಾಯಾತ್ರೆ ಸಿದ್ದತೆ ವೇಳೆ ಯುವಕ ಸಾವು

ದಾವಣಗೆರೆ : ಒಂದು ಕಡೆ ಹಿಂದೂ ಮಹಾಗಣಪತಿ ಶೋಭಾಯಾತ್ರೆ ಸಿದ್ದತೆ. ಮತ್ತೊಂದೆಡೆ ಶೋಕ..! ಈ ದುರ್ಘಟನೆ ಬೆಣ್ಣೆನಗರಿ ದಾವಣಗೆರೆಯಲ್ಲಿ ನಡೆದಿದೆ.

ದಾವಣಗೆರೆ ಪಿ.ಬಿ ರಸ್ತೆಯಲ್ಲಿ ಕೇಸರಿ ಧ್ವಜ ಕಟ್ಟುವಾಗ ಯುವಕನ ತಲೆ ಮೇಲೆ ಕ್ರೇನ್ ಹರಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಬಸವರಾಜಪೇಟೆಯ ಪೃಥ್ವಿರಾಜ್ (26) ಮೃತಪಟ್ಟ ದುರ್ದೈವಿ ಯುವಕ.

ನಗರ ಪಿ.ಬಿ ರಸ್ತೆಯ ರೇಣುಕಾಮಂದಿರದ ಬಳಿ ಹಿಂದೂ ಮಹಾಗಣಪತಿ ಶೋಭಾಯಾತ್ರೆಗೆ ಕೇಸರಿ ಧ್ವಜಗಳನ್ನು ಕಟ್ಟಲಾಗುತ್ತಿತ್ತು. ಕ್ರೇನ್ ಹಿಂದೆ ನಿಂತಿದ್ದ ಪೃಥ್ವಿರಾಜ್ ನನ್ನು ಗಮನಿಸದೆ ಚಾಲಕ ಕ್ರೇನ್ ಹಿಂದಕ್ಕೆ ಬಿಟ್ಟಿದ್ದಾನೆ. ತಲೆ ಮೇಲೆ ಕ್ರೇನ್ ಹರಿದ ಹಿನ್ನಲೆ ಸ್ಥಳದಲ್ಲೇ ಪೃಥ್ವಿರಾಜ್ ಮೃತಪಟ್ಟಿದ್ದಾನೆ.

ಘಟನೆ ಬಗ್ಗೆ ಮಾಹಿತಿ ತಿಳಿದ ಕೂಡಲೇ ಬಡಾವಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ್ದಾರೆ. ಕೂಡಲೇ ಪೃಥ್ವಿರಾಜ್ ಮೃತದೇಹವನ್ನು ಜಿಲ್ಲಾಸ್ಪತ್ರೆಗೆ ರವಾನಿಸಿದ್ದಾರೆ. ಜಿಲ್ಲಾಸ್ಪತ್ರೆಯ ಮುಂಭಾಗ ಮೃತನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಈ ಸಂಬಂಧ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version