Site icon PowerTV

ಬೆಂಗಳೂರಿನ ಮೊದಲ ಶತ್ರು ಬಿಬಿಎಂಪಿ : ಹೈಕೋರ್ಟ್ ತರಾಟೆ

ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ಅಕ್ರಮ ಹೋರ್ಡಿಂಗ್‌ಗಳ ಮೇಲೆ ನಿಗಾ ಇರಿಸಲು ವಿಫಲವಾದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು ಕರ್ನಾಟಕ ಹೈಕೋರ್ಟ್ ತೀವ್ರ ತರಾಟೆ ತೆಗೆದುಕೊಂಡಿದೆ.

ಬಿಬಿಎಂಪಿಯೇ ಬೆಂಗಳೂರಿನ ಮೊದಲ ಶತ್ರು ಎಂದಿರುವ ಹೈಕೋರ್ಟ್‌ ನಗರದಲ್ಲಿನ ಎಲ್ಲ ಹೋರ್ಡಿಂಗ್ಸ್ ಮತ್ತು ಫ್ಲೆಕ್ಸ್‌ಗಳ ಸಮೀಕ್ಷೆ ನಡೆಸಿ ನವೆಂಬರ್ 28ರ ಮೊದಲು ವರದಿ ಸಲ್ಲಿಸುವಂತೆ ಹೈಕೋರ್ಟ್ ಆದೇಶಿಸಿದೆ.

ಮಹಾನಗರ ಪಾಲಿಕೆಯು ಕ್ರಮ ತೆಗೆದುಕೊಳ್ಳಲು ವಿಫಲವಾದಲ್ಲಿ ನಗರದಲ್ಲಿ ಅಳವಡಿಸುವ ಪ್ರತಿ ಅಕ್ರಮ ಹೋರ್ಡಿಂಗ್‌ಗೆ 50 ಸಾವಿರ ರೂ. ದಂಡ ವಿಧಿಸುವುದಾಗಿ ಈ ಹಿಂದೆಯೇ ಹೈಕೋರ್ಟ್‌ ಎಚ್ಚರಿಕೆ ನೀಡಿತ್ತು. ಆದರೆ, ನಗರದಾದ್ಯಂತ ಅಕ್ರಮ ಫ್ಲೆಕ್ಸ್‌ ಹಾಗೂ ಬ್ಯಾನರ್‌ ತೆರವಿಗೆ ಬಿಬಿಎಂಪಿ ನಿರ್ಲಕ್ಷ್ಯ ವಹಿಸಿರುವುದಕ್ಕೆ ಹೈಕೋರ್ಟ್‌ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

Exit mobile version