Site icon PowerTV

ಇಸ್ರೇಲ್ ಮೇಲಿನ ದಾಳಿಗೆ 4 ಕೋಟಿ ಕದ್ದ ಹಮಾಸ್

ಬೆಂಗಳೂರು : ಇಸ್ರೇಲ್ ಮೇಲಿನ ದಾಳಿಗೆ ಹಣ ನೀಡಲು ಹಮಾಸ್, ದೆಹಲಿಯ ಉದ್ಯಮಿಯೊಬ್ಬರ ಕ್ರಿಪ್ಟೋ ಖಾತೆಯಿಂದ 4 ಕೋಟಿ ಹಣವನ್ನ ಕದ್ದಿದೆ ಎಂದು ಇಸ್ರೇಲ್ ಗುಪ್ತಚರ ಸಂಸ್ಥೆಯಾದ ಮೋಸಾದ್ ಹೇಳಿದೆ.

ದೆಹಲಿ ಪೊಲೀಸರ ವಿಶೇಷ ತನಿಖಾ ತಂಡ ಕ್ರಿಪ್ಟೋಕರೆನ್ಸಿ ಕಳ್ಳತನದ ಪ್ರಕರಣವನ್ನು ತನಿಖೆ ನಡೆಸುತ್ತಿತ್ತು. ಪಶ್ಚಿಮ ದೆಹಲಿಯ ಉದ್ಯಮಿಯೊಬ್ಬರು ಖಾತೆಯಿಂದ 4 ಕೋಟಿ ಹಣವನ್ನ ಕದಿಯಲಾಗಿದೆ ಎಂದು ದೂರು ನೀಡಿದ್ದರು.

ಪ್ರಕರಣದ ಬೆನ್ನತ್ತಿದ ದೆಹಲಿ ಪೊಲೀಸರಿಗೆ ಕೇವಲ ಪ್ರಾಥಮಿಕ ಹಂತದ ಮಾಹಿತಿಗಳು ಮಾತ್ರ ಸಿಕ್ಕಿದ್ದವು. ಆದ್ರೆ, ಮುಖ್ಯ ಆರೋಪಿಯನ್ನ ಹುಡುಕುವಲ್ಲಿ ವಿಫಲರಾಗಿದ್ದರು. ಆದರೆ ಇದೀಗ ಇಸ್ರೇಲ್ ಗುಪ್ತಚರ ತನಿಖಾ ಸಂಸ್ಥೆ ಮೊಸಾದ್ ಈ ಬಗ್ಗೆ ಖಚಿತಪಡಿಸಿದ್ದು, ಹಮಾಸ್ ಇಸ್ರೇಲ್ ಮೇಲಿನ ದಾಳಿಗೆ ಹಣವನ್ನ ಕದ್ದಿದೆ ಎಂದಿದೆ.

ಲೆಬನಾನ್, ಸಿರಿಯಾದಿಂದಲೂ ದಾಳಿ

ಹಮಾಸ್ ಉಗ್ರರ ದಾಳಿ ಬೆನ್ನಲ್ಲೇ ಪ್ಯಾಲೆಸ್ತೀನ್ ಮೇಲೆ ಮುಗಿಬಿದ್ದಿರುವ ಇಸ್ರೇಲ್ ಸೇನೆ ಯುದ್ಧ ಆರಂಭವಾದ 5 ದಿನಗಳಲ್ಲೇ ಗಾಜಾಪಟ್ಟಿಯನ್ನು ತನ್ನ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದೆ. ಪ್ಯಾಲೆಸ್ತೀನ್​​ನ ಹಮಾಸ್ ಉಗ್ರರ ದಾಳಿಯಿಂದ ಕಂಗೆಟ್ಟಿರುವ ಇಸ್ರೇಲ್ ಮೇಲೆ ಇದೀಗ ಬಹು ರಾಷ್ಟ್ರೀಯ ದಾಳಿ ನಡೆಯುತ್ತಿದ್ದು, ಪ್ಯಾಲೆಸ್ತೀನ್ ನೊಂದಿಗಿನ ಯುದ್ಧ ಚಾಲ್ತಿಯಲ್ಲಿರುವಂತೆ ಮತ್ತೊಂದು ಬದಿಯಲ್ಲಿ ಲೆಬನಾನ್ ಮತ್ತು ಸಿರಿಯಾ ದೇಶಗಳೂ ಕೂಡ ಗಡಿಯಲ್ಲಿ ಇಸ್ರೇಲ್ ಸೇನೆ ಮೇಲೆ ದಾಳಿ ನಡೆಸಿವೆ.

ಇಸ್ರೇಲ್‌ ಹಾಗೂ ಹಮಾಸ್‌ ಉಗ್ರರ ನಡುವಿನ ಸಮರವು ದಿನೇದಿನೆ ಕಾವೇರುತ್ತಿದೆ. ಇಸ್ರೇಲ್‌ ಮೇಲೆ ಪ್ಯಾಲೆಸ್ತೀನ್‌ ಉಗ್ರರು, ಗಾಜಾಪಟ್ಟಿ ಮೇಲೆ ಇಸ್ರೇಲ್‌ ಸೇನೆಯು ನಿರಂತರವಾಗಿ ದಾಳಿ ನಡೆಸುತ್ತಿದೆ. ಹಮಾಸ್‌ ಉಗ್ರರನ್ನು ನಿರ್ನಾಮ ಮಾಡಿಯೇ ತೀರುತ್ತೇವೆ ಎಂದು ಪಣ ತೊಟ್ಟಿರುವ ಇಸ್ರೇಲ್‌ ಈಗ ತನ್ನ ದಾಳಿ ತೀವ್ರಗೊಳಿಸಿದೆ.

Exit mobile version