Site icon PowerTV

ಕಬಡ್ಡಿ ಟೂರ್ನಿಯಲ್ಲಿ ಎರಡು ತಂಡಗಳ ನಡುವೆ ಮರಾಮಾರಿ!

ಕಾನ್​ಪುರ: ಕಬಡ್ಡಿ ಟೂರ್ನಿಯಲ್ಲಿ ಎರಡು ತಂಡದ ಕಬಡ್ಡಿ ಪಟುಗಳು ಕಬಡ್ಡಿ ಆಡುವ ಬದಲು ಕುರ್ಚಿ, ಮೇಜು ಹಿಡಿದು ಬಡಿದಾಡಿಕೊಂಡಿದ್ದಾರೆ. ಭೀಕರ ಮಾರಾಮಾರಿ ನಡೆದಿದೆ. ಘಟನೆಯಲ್ಲಿ ಉಭಯ ತಂಡದ ಆಟಗಾರರು ಗಾಯಗೊಂಡಿರುಗ ಘಟನೆ ಕಾನ್ಪುರದಲ್ಲಿ ನಡೆದಿದೆ.

ಐಐಟಿ ಕಾನ್ಪುರ ಕಾಲೇಜಿನ ವಿದ್ಯಾರ್ಥಿಗಳ ಕಬಡ್ಡಿ ಟೂರ್ನಿಗೆ ಎಲ್ಲಾ ಸಿದ್ಧತೆ ಮಾಡಲಾಗಿತ್ತು. ವಿದ್ಯಾರ್ಥಿಗಳ ತಂಡಗಳು ಟೂರ್ನಿಗೆ ಸಜ್ಜಾಗಿತ್ತು. ಜರ್ಸಿ ಧರಿಸಿ ಆಟಕ್ಕೆ ಸಜ್ಜಾಗಿದ್ದರು. ಆದರೆ ಪಂದ್ಯ ಆಡುವ ಬದಲು ವಿದ್ಯಾರ್ಥಿಗಳು ಹೊಡೆದಾಡಿದ್ದಾರೆ. ಒಳಾಂಗಣ ಕ್ರೀಂಡಾಗಣದಲ್ಲಿ ಪ್ರೇಕ್ಷಕರಿಗೆ ಇಟ್ಟಿದ್ದ ಕುರ್ಚಿಯನ್ನು ತೆಗೆದು ಬಡಿದಾಡಿಕೊಂಡಿದ್ದಾರೆ.

ಇದನ್ನೂ ಓದಿ: ಇಂದು ಕಾವೇರಿ ನಿಯಂತ್ರಣ ಸಮಿತಿ ಸಭೆ

ಘಟನೆ ಬೆನ್ನಲ್ಲೇ ಎರಡು ತಂಡವನ್ನು ಅಮಾನತು ಮಾಡಲಾಗಿದೆ. ಈ ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗಿದೆ. ಐಐಟಿ ಕಾನ್ಪುರ ಕಾಲೇಜಿನಲ್ಲಿ ನಡೆದ ಈ ಕಬಡ್ಡಿ ಟೂರ್ನಿ ರಣಾಂಗಣವಾಗಿ ಇದೀಗ ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದೆ.

 

Exit mobile version