Site icon PowerTV

ಸಲಾಂ..! ರೈಲಿನಿಂದ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಿಸಿದ ಯೋಧ

ಬೆಂಗಳೂರು : ಚಲಿಸುತ್ತಿರುವ ವಂದೇ ಭಾರತ್ ರೈಲನ್ನು ಹತ್ತಲು ಹೋಗಿ ಪ್ರಯಾಣಿಕರೊಬ್ಬರು ಆಯತಪ್ಪಿ ಬಿದ್ದಿರುವ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.

ಪಶ್ಚಿಮ ಬಂಗಾಳದ ಹೌರಾ ರೈಲು ನಿಲ್ದಾಣದಲ್ಲಿ ಚಲಿಸುತ್ತಿರುವ ವಂದೇ ಭಾರತ್ ರೈಲನ್ನು ಹತ್ತಲು ಪ್ರಯತ್ನಿಸಿದ ಒಬ್ಬ ವ್ಯಕ್ತಿಯ ಜೀವವನ್ನು ರೈಲ್ವೇ ರಕ್ಷಣಾ ಪಡೆ ಜವಾನ್ ಉಳಿಸಿದ್ದಾರೆ. ಅಲ್ಲೇ ಇದ್ದ ವ್ಯಕ್ತಿಯೊಬ್ಬರು ಇಡೀ ಘಟನೆಯನ್ನು ರೆಕಾರ್ಡ್​ ಮಾಡಿದ್ದಾರೆ.

ಅಕ್ಟೋಬರ್ 10ರಂದು ಮಂಗಳವಾರ ಹೌರಾ-ಪುರಿ ವಂದೇ ಭಾರತ್ ಎಕ್ಸ್​ಪ್ರೆಸ್ ಹೌರಾ ನಿಲ್ದಾಣದಿಂದ ಹೊರಡುತ್ತಿರುವಾಗ ಘಟನೆ ಸಂಭವಿಸಿದೆ. ಪ್ರಯಾಣಿಕರೊಬ್ಬರು ಹೊರಟಿದ್ದ ರೈಲಿನ ಹಿಂದೆ ಓಡಿ ರೈಲು ವ್ಯವಸ್ಥಾಪಕರ ಕ್ಯಾಬಿನ್ ಮೂಲಕ ಪ್ರವೇಶಿಸಲು ಯತ್ನಿಸಿದ್ದರು. ಆದರೆ, ಆಯ ತಪ್ಪಿ ರೈಲು ಹಾಗೂ ಪ್ಲಾಟ್​ಫಾರ್ಮ್​ ನಡುವೆ ಸಿಲುಕಿಕೊಂಡಿದ್ದರು. ತಕ್ಷಣ ಎಚ್ಚೆತ್ತ ಆರ್​ಪಿಎಫ್ ಸಿಬ್ಬಂದಿ ಅವರತ್ತ ಓಡಿಬಂದು ಅವರನ್ನು ಮೇಲಕ್ಕೆತ್ತಿದ್ದಾರೆ. ಪ್ರಯಾಣಿಕ ಯಾವುದೇ ಗಂಭೀರ ಗಾಯಗಳಾಗದೆ ಅಪಾಯದಿಂದ ಪಾರಾಗಿದ್ದಾರೆ.

Exit mobile version