Site icon PowerTV

ಬಿಬಿಎಂಪಿ ಮಾರ್ಷಲ್ ಉದ್ಯೋಗ ಕೊಡಿಸುವುದಾಗಿ 6 ಲಕ್ಷ ವಂಚನೆ

ಬೆಂಗಳೂರು : ಬಿಬಿಎಂಪಿ ಮಾರ್ಷಲ್ ನೌಕರಿ ಕೊಡುಸುವುದಾಗಿ ವಂಚನೆ ಮಾಡಿರುವ ಘಟನೆ ಬೆಂಗಳೂರಿನ ಹಲಸೂರಿನಲ್ಲಿ ನಡೆದಿದೆ.

200ಕ್ಕೂ ಹೆಚ್ಚು ಉದ್ಯೋಗಾಕಾಂಕ್ಷಿಗಳಿಂದ ಹಣ ಪಡೆದು ಮೋಸ ಮಾಡಿದವರನ್ನ ಬಂಧಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದ್ದಾರೆ.

ಎಂ. ಹರ್ಷ ಬಂಧಿತ ಆರೋಪಿ. ಈತನು SSLC ಓದಿದ್ದಾನೆ. ಹಲಸೂರು ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಕೇಸ್ ದಾಖಲಾಗಿತ್ತು. ಹರ್ಷ ಕೋವಿಡ್-19 ಸಮಯದಲ್ಲಿ ಬಿಬಿಎಂಪಿಯಲ್ಲಿ ಕೆಲಸ ಮಾಡಿಕೊಂಡಿದ್ದ. ಬಿಬಿಎಂಪಿಯಲ್ಲಿ ಮಾರ್ಷಲ್ ನೌಕರಿ ಕೊಡಿಸುವುದಾಗಿ ಸುಮಾರು 6 ಲಕ್ಷಕ್ಕೂ ಹೆಚ್ಚು ವಂಚನೆ ಮಾಡಿರುವ ಆರೋಪ ಕೇಳಿಬಂದಿದೆ.

3,000 ನೀಡಿದ್ರೆ ನೇರ ನೇಮಕಾತಿ

ಸುಮಾರು 200 ಉದ್ಯೋಗಾಕಾಂಕ್ಷಿಗಳಿಗೆ ವಂಚಿಸಿರುವ ಹರ್ಷ, ತಾನೂ ಬಿಬಿಎಂಪಿಯಲ್ಲಿ‌ ಕೆಲಸ ಮಾಡುತ್ತಿರುವುದಾಗಿ ಸುಳ್ಳು ಹೇಳುತ್ತಿದ್ದ. 3,000 ನೀಡಿದ್ರೆ ನೇರ ನೇಮಕಾತಿ ಮಾಡಿಸುವುದಾಗಿ ಹೇಳುತ್ತಿದ್ದ ಆರೋಪಿ, ನಕಲಿ ನೇಮಕಾತಿ ಪತ್ರ ನೀಡಿ ವಂಚಿಸುತ್ತಿದ್ದನು.

Exit mobile version