Site icon PowerTV

ಹಮಾಸ್ ಉಗ್ರರಿಂದ 40 ಮಕ್ಕಳ ಶಿರಚ್ಛೇಧ!

ಹಮಾಸ್ ಉಗ್ರರ ಮೇಲೆ ಯುದ್ಧ ತೀವ್ರಗೊಳಿಸಿರುವ ಇಸ್ರೇಲ್, ಗಾಜಾ ಪಟ್ಟಿಯಲ್ಲಿ ನಿರಂತರ ಏರ್‌ಸ್ಟ್ರೈಕ್ ನಡೆಸುತ್ತಿದೆ. ಹಮಾಸ್ ಉಗ್ರರ ಬಿಲಗಳನ್ನು ಹುಡುಕಿ ಹುಡುಕಿ ಧ್ವಂಸ ಮಾಡುತ್ತಿದೆ. ಆದರೆ ಇಸ್ರೇಲ್ ಹೆಜ್ಜೆ ಹೆಜ್ಜೆಗೂ ಹಮಾಸ್ ಉಗ್ರರು ನಡೆಸುತ್ತಿರುವ ಭೀಕರತೆಗೆ ಬೆಚ್ಚಿ ಬೀಳುತ್ತಿದೆ.

ಇಸ್ರೇಲ್ ಮಾತ್ರವಲ್ಲ ಜಗತ್ತೇ ಹಮಾಸ್ ಉಗ್ರರ ಕ್ರೂರಿ ವರ್ತನೆಗೆ ಮರುಗುತ್ತಿದೆ. ನಿರಂತರ ಪ್ರತಿದಾಳಿ ನಡೆಸುತ್ತಿರುವ ಇಸ್ರೇಲ್‌ ವಿರುದ್ಧ ಪ್ರತೀಕಾರಕ್ಕೆ ಹಮಾಸ್ ಉಗ್ರರು 40 ಇಸ್ರೇಲ್ ಮಕ್ಕಳ ಶಿರಚ್ಛೇಧ ಮಾಡಿದ್ದಾರೆ ಎಂದು ಇಸ್ರೇಲ್ ಮಾಧ್ಯಮ ವರದಿ ಮಾಡಿದೆ.

ಇಸ್ರೇಲ್‌ ಒಳ ನುಗ್ಗಿ ಹಮಾಸ್ ಉಗ್ರರು ಶನಿವಾರದಿಂದ ನಡೆಸಿರುವ ಭೀಕರ ಹತ್ಯೆಯಲ್ಲಿ 40 ಮಕ್ಕಳ ಶಿರಚ್ಚೇಧ ಮಾಡಿರುವ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಇಸ್ರೇಲ್ ಸೈನಿಕರು ಕಾರ್ಯಾಚರಣೆಯಲ್ಲಿ ಹಲವು ಭಾಗದಲ್ಲಿ ಮಕ್ಕಳು, ಪೋಷಕರು ಸೇರಿದಂತೆ ಕುಟುಂಬಗಳನ್ನೇ ಹತ್ಯೆ ಮಾಡಿರುವ ಘಟನೆಗಳೇ ಎದುರಾಗುತ್ತಿದೆ. ಇಸ್ರೇಲ್ ಮನೆಗಳ ಮೇಲೆ ದಾಳಿ ಮಾಡಿದ ಹಮಾಸ್ ಉಗ್ರರು ಶಿರಚ್ಚೇಧ ಮಾಡಿದ್ದಾರೆ. ಇದರಲ್ಲಿ 40ಕ್ಕೂ ಹೆಚ್ಚು ಮಕ್ಕಳೇ ಇದ್ದಾರೆ.


 

Exit mobile version