ದೇವನಹಳ್ಳಿ : ತಾಲೂಕು ದಂಡಾಧಿಕಾರಿಗಳ ನೇತೃತ್ವದ ಅಧಿಕಾರಿಗಳ ತಂಡ ಇಂದು ತಾಲೂಕಿನಲ್ಲಿ ಅನಧಿಕೃತ ಗೋದಾಮುಗಳ ಮೇಲೆ ದಾಳಿ ನಡೆಸಿರುವ ಘಟನೆ ನಡೆದಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ತಾಲೂಕಿನ ಅತ್ತಿಬೆಲೆಯಲ್ಲಿ ಪಟಾಕಿ ಗೋದಾಮಿನಲ್ಲಿ ನಡೆದ ದುರಂತದ ಹಿನ್ನೆಲೆ ಎಚ್ಚೆತ್ತುಕೊಂಡ ದೇವನಹಳ್ಳಿ ತಹಶಿಲ್ದಾರ್ ಶಿವರಾಜ್ ಅವರು ತಾಲೂಕಿನ ಅನಧಿಕೃತ ಗೋದಾಮುಗಳ ಮೇಲೆ ದಾಳಿ ನಡೆಸಿದ್ದಾರೆ.
ಇದನ್ನೂ ಓದಿ: ಮೊಬೈಲ್ ಕೊಡದಿದ್ದಕ್ಕೆ ಯುವಕನಿಗೆ ಚೂರಿ ಇರಿತ!
ತಾಲೂಕಿನ ರೆಡ್ಡಿಹಳ್ಳಿ ಗ್ರಾಮದ ವಸತಿ ಪ್ರದೇಶದಲ್ಲಿ ಎಂಟಿಆರ್ ರಮೇಶ್ ಗೌಡ ಎಂಬುವವರಿಗೆ ಸೇರಿದ್ದ ಗೊದಾಮಿನಲ್ಲಿ ಪಟಾಕಿ ದಾಸ್ತಾನು ಮಾಡಿರುವ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅಧಿಕಾರಿಗಳ ತಂಡ ಸುಮಾರು 10 ಲಕ್ಷ ಮೌಲ್ಯಕ್ಕಿಂತ ಹೆಚ್ಚಿನ ಪ್ರಮಾಣದ ಪಟಾಕಿ ದಾಸ್ತಾನನ್ನು ಮಹಜರ್ ಮಾಡಿದ್ದಾರೆ.
ಗೋದಾಮು ದಾಳಿಗೆ ತಾಲೂಕಿನ ಚನ್ನರಾಯ ಪಟ್ಟಣ ಪೊಲೀಸರು, ಅಗ್ನಿ ಶಾಮಕ ಸಿಬ್ಬಂದಿ ಸಾಥ್
ನೀಡಿದ್ದಾರೆ.


