Site icon PowerTV

ಅನುದಾನ ಕೊಡಿ ಅಂತ ‘ಕೈ’ ಮುಗಿದಿದ್ದೇನೆ, ನಾಳೆ ಕಾಲು ಕೂಡ ಹಿಡಿತೀನಿ : ಮುನಿರತ್ನ

ಬೆಂಗಳೂರು : ಚುನಾವಣೆಯಲ್ಲಿ ನಾನು ನನ್ನ ಮತದಾರರ ಬಳಿ‌ ಭಿಕ್ಷೆ ಬೇಡಿದ್ದೇನೆ, ಅವರ ಋಣ ತೀರಿಸಬೇಕಿದೆ ಕ್ಷೇತ್ರಕ್ಕಾಗಿ ನಾನು ಅವರಿಗೆ ಅನುದಾನ ಕೊಡಿ ಅಂತ ಇವತ್ತು ಕೈ ‌ಮುಗಿದಿದ್ದೇನೆ. ನಾಳೆ ಬೇಕಾದರೆ ಅವರ ಕಾಲು ಕೂಡ ಹಿಡಿದುಕೊಳ್ತೇನೆ ಎಂದು ಬಿಜೆಪಿ ಶಾಸಕ ಮುನಿರತ್ನ ಹೇಳಿದರು.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನದಿ ಮೂಲ, ಋಷಿ ಮೂಲ‌‌ ಪತ್ತೆ ಮಾಡಬಾರದು. ನನ್ನ ವಿರುದ್ಧ ಟಾರ್ಗೆಟ್ ಸಹ ಹಾಗೇ ಎಂದು ಡಿ.ಕೆ ಶಿವಕುಮಾರ್​ಗೆ ಪರೋಕ್ಷವಾಗಿ ಟಾಂಗ್ ಕೊಟ್ಟರು.

ಕ್ಷೇತ್ರದ ಜನತೆಗಾಗಿ ಅವರ ಕಾಲು ಹಿಡಿದು ಅನುದಾನ ಕೇಳ್ತಿನಿ. ನನಗೆ ಇವತ್ತು ಅಂಥ ಪರಿಸ್ಥಿತಿ ಬಂದಿದೆ. ನನ್ನ ಕ್ಷೇತ್ರದ ಅನುದಾನ ಬಿಟ್ಟುಕೊಡಲು ಡಿ.ಕೆ ಶಿವಕುಮಾರ್ ಹಾಗೂ ಅವರ ಸಹೋದರ ಡಿ.ಕೆ ಸುರೇಶ್ ಬಳಿ ಕೈ ಮುಗಿದು ಕೇಳಿಕೊಳ್ತೇನೆ. ನನ್ನ ಕ್ಷೇತ್ರದ ಜನರ ಋಣ ತೀರಿಸಬೇಕಿದೆ, ಅನುದಾನ ಬಿಟ್ಕೊಡಿ ಎಂದು ಹೇಳಿದರು.

ನನ್ನ ಮೇಲೆ ತನಿಖೆ ಆಗಲಿ

ಡಿ.ಕೆ ಶಿವಕುಮಾರ್ ಅವರ ಸಹೋದರ ಡಿ.ಕೆ ಸುರೇಶ್ ಕ್ಷೇತ್ರಕ್ಕೆ ಅನ್ಯಾಯ ಮಾಡಿದ್ದಾರೆ. ನಾನು ಆರ್.ಆರ್ ನಗರ ಶಾಸಕ, ಡಿ.ಕೆ ಸುರೇಶ್ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ. ನಮ್ಮ ಕ್ಷೇತ್ರದಲ್ಲಿ ಕಾಮಗಾರಿಗಳಲ್ಲಿ‌ ಅಕ್ರಮ ಆಗಿದ್ರೆ ತನಿಖೆ ಆಗಲಿ. ನನ್ನ ಮೇಲೆ, ಸುರೇಶ್ ಅವರ ಮೇಲೆ ತನಿಖೆ ಆಗಲಿ ಎಂದು ಮುನಿರತ್ನ ಸವಾಲೆಸೆದರು.

Exit mobile version