Site icon PowerTV

ಸಿದ್ದರಾಮಯ್ಯ ಪಾಪದ ಕೊಡ ತುಂಬಿದೆ, ಅಧಿಕಾರದ ಮದದಲ್ಲಿ ನಿದ್ದೆ ಹೋಗಿದ್ದಾರೆ : ಡಾ.ಕೆ. ಸುಧಾಕರ್

ಚಿಕ್ಕಬಳ್ಳಾಪುರ : ಈಗಾಗಲೇ ಪಂಜಾಬ್ ರಾಜ್ಯ ದಿವಾಳಿ ಆಗಿದೆ. ಸಿದ್ದರಾಮಯ್ಯ ಅಧಿಕಾರದ ಮದದಲ್ಲಿ ನಿದ್ದೆ ಹೋಗಿದ್ದಾರೆ. ಸಿದ್ದರಾಮಯ್ಯ ಸರ್ಕಾರದ ಪಾಪದ ಕೊಡ ತುಂಬಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಜನ ಉತ್ತರ ಕೊಡುತ್ತಾರೆ ಎಂದು ಕಾಂಗ್ರೆಸ್​ ಸರ್ಕಾರದ ವಿರುದ್ಧ ಮಾಜಿ ಸಚಿವ ಡಾ.ಕೆ. ಸುಧಾಕರ್ ವಾಗ್ದಾಳಿ ನಡೆಸಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಸಿದ್ದರಾಮಯ್ಯ ಅವರನ್ನು 2013ರಿಂದ ನೋಡುತ್ತಿದ್ದೇನೆ. ಕಾಂತರಾಜ್‌ ಆಯೋಗ ಮಾಡಿದ್ದೇ ಮಾಡಿದ್ದು, ಯಾಕೆ ಅವರ ಕಾಲದಲ್ಲಿ ಬಿಡುಗಡೆ ‌ಮಾಡಲಿಲ್ಲ. ರಾಜಕೀಯ ವಿಷಯ ‌ಬೇರೆಡೆಗೆ ಸೆಳೆಯೋ ತಂತ್ರ. ಇದೊಂದು ರಾಜಕೀಯ ದುರುದ್ದೇಶ ಎಂದು ಕುಟುಕಿದ್ದಾರೆ.

ಕೆಲವು ಜಾತಿಗಳ ಮಧ್ಯೆ ಧ್ವೇಷ ಮೂಡಿಸುತ್ತದೆ, ಅಸಮಾಧಾನ ಮೂಡಿಸುತ್ತದೆ. ಜಾತಿ ಜಾತಿಗಳ ಮಧ್ಯೆ ಕಲಹ ಉಂಟು ಮಾಡಿ ಲಾಭ ಪಡೆದುಕೊಳ್ಳುವುದು ಕಾಂಗ್ರೆಸ್ ಇತಿಹಾಸ. ಕೆಲವು ಗ್ಯಾರಂಟಿಗಳ ಮೂಲಕ ರಾಜ್ಯವನ್ನು ದಿವಾಳಿ ಮಾಡಿದ್ದಾರೆ. ಸಿದ್ದರಾಮಯ್ಯ  ಅಧಿಕಾರಕ್ಕೆ ಬಂದ ಮೇಲೆ ರೈತರ ಆತ್ಮಹತ್ಯೆಗಳು ಹೆಚ್ಚಾಗಿವೆ. ರಾಜ್ಯದಲ್ಲಿ ರೈತರ ಬದುಕಿಗೆ ಗ್ಯಾರಂಟಿ ಇಲ್ಲ ಎಂದು ಕಿಡಿಕಾರಿದ್ದಾರೆ.

HDKಗೆ ಸ್ಥಾನ ಕೊಡಲು ಸಾಧ್ಯವಿಲ್ಲ

ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ವಿಪಕ್ಷ ನಾಯಕ ಆಗ್ತಾರಾ? ಎಂಬ ಸುದ್ದಿಗಾರರ ಪ್ರಶ್ನೆಗೆ, ಕುಮಾರಸ್ವಾಮಿ ವಿರೋಧ ಪಕ್ಷದ ನಾಯಕ ಆಗಲು ಕೆಲವೊಂದು ಕಾನೂನಾತ್ಮಕ ‌ಅಡಚಣೆ ಆಗುತ್ತದೆ ಅನ್ಸುತ್ತೆ. ನಮ್ಮ ಪಕ್ಷದಲ್ಲಿ 66 ಜನ ಶಾಸಕರಿದ್ದಾರೆ. ಮಾಜಿ ಸಿಎಂ, ಹಿರಿಯ ನಾಯಕರಿದ್ದಾರೆ. ನಾವು ಸಣ್ಣ ಪ್ರಾದೇಶಿಕ ಪಕ್ಷಕ್ಕೆ ವಿಪಕ್ಷ ನಾಯಕ ಸ್ಥಾನ ಕೊಡುವ ವಿಚಾರ ಪಕ್ಷದ ‌ಮುಂದೆ ಇಲ್ಲ ಅನ್ಸುತ್ತೆ ಎಂದು ಡಾ.ಕೆ. ಸುಧಾಕರ್ ಹೇಳಿದ್ದಾರೆ.

Exit mobile version