Site icon PowerTV

ಮಹದೇಶ್ವರ ಬೆಟ್ಟದ ಖಾಸಗಿ ಲಾಡ್ಜ್​ನಲ್ಲಿ ಡಿಆರ್ ಪೇದೆ ನೇಣಿಗೆ ಶರಣು

ಚಾಮರಾಜನಗರ : ಮಂಡ್ಯ ಡಿಆರ್ ಪೇದೆಯೋರ್ವ ಚಾಮರಾಜನಗರ ಜಿಲ್ಲೆಯ ಮಹದೇಶ್ವರ ಬೆಟ್ಟದ ಖಾಸಗಿ ಲಾಡ್ಜ್‌ವೊಂದರಲ್ಲಿ ನೇಣಿಗೆ ಶರಣಾಗಿದ್ದಾರೆ.

ಮಂಡ್ಯ ತಾಲೂಕಿನ ಹೊಸಳ್ಳಿ ಗ್ರಾಮದ ರಾಜೇಂದ್ರ ಪ್ರಸಾದ್ (40) ಆತ್ಮಹತ್ಯೆ ಮಾಡಿಕೊಂಡ ಪೇದೆ. ಮಂಡ್ಯ ನಗರದಲ್ಲಿ ಡಿಆ‌ರ್ ಪೊಲೀಸ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಮೃತ ಪೇದೆ ರಾಜೇಂದ್ರ ಪ್ರಸಾದ್ ಒಬ್ಬರೇ ಮಲೆ ಮಹದೇಶ್ವರ ಬೆಟ್ಟಕ್ಕೆ ಬಂದು ಖಾಸಗಿ ಲಾಡ್ಜ್‌ನಲ್ಲಿ ಉಳಿದುಕೊಂಡಿದ್ದರು. ಬೆಳಗ್ಗೆಯಿಂದಲೂ ಲಾಡ್ಜ್​ನ ರೂಮಿನಿಂದ ಹೊರಬರದ ಕಾರಣ ರೂಮ್ ಬಾಗಿಲು ತೆರದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.

ರಾಜೇಂದ್ರ ಪ್ರಸಾದ್ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಪತ್ತೆಯಾಗಿ. ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಮಲೆ ಮಹದೇಶ್ವರ ಬೆಟ್ಟದ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದರು. ಪೇದೆ ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಈ ಸಂಬಂಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version