Site icon PowerTV

ನಿಮ್ಮಿಂದಲೇ ಭಾರತದ ವಾಯು ಪ್ರದೇಶ ಸುರಕ್ಷಿತವಾಗಿದೆ: ಪ್ರಧಾನಿ ಮೋದಿ

ದೆಹಲಿ: ನಿಮ್ಮಿಂದಲೇ ಭಾರತದ ವಾಯು ಪ್ರದೇಶ ಸುರಕ್ಷಿತವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಭಾರತೀಯ ವಾಯುಪಡೆ ದಿನದ ಹಿನ್ನೆಲೆಯಲ್ಲಿ ವಾಯು ಯೋಧರು ಹಾಗೂ ಅವರ ಕುಟುಂಬಕ್ಕೆ ಶುಭಾಶಯ ತಿಳಿಸಿದರು. ಭಾರತದ ವಾಯುಪಡೆಯ ಶೌರ್ಯ, ಬದ್ಧತೆ ಮತ್ತು ಸಮರ್ಪಣೆಯ ಬಗ್ಗೆ ಭಾರತವು ಹೆಮ್ಮೆ ಪಡುತ್ತದೆ. ಅವರ ಮಹಾನ್ ಸೇವೆ ಹಾಗೂ ತ್ಯಾಗದಿಂದಲೇ ನಮ್ಮ ವಾಯು ಪ್ರದೇಶ ಸುರಕ್ಷಿತವಾಗಿದೆ. ದೇಶದ ಸಮಗ್ರತೆ ಹಾಗೂ ಸಾರ್ವಭೌಮತ್ವ ಕಾಪಾಡುವಲ್ಲಿ ಅವರ ಕೊಡುಗೆಗೆ ಸಾಟಿಯಿಲ್ಲ ಎಂದರು.

ಇದನ್ನೂ ಓದಿ: ಹೊಸ ಮದ್ಯದಂಗಡಿ ತೆರೆಯುವ ಪ್ರಸ್ತಾಪ ಇಲ್ಲ: ಸಚಿವ ಆರ್​.ಬಿ ತಿಮ್ಮಾಪುರ!

90 ವರ್ಷಗಳ ಹಿಂದೆ 1932ರ ಅಕ್ಟೋಬರ್ 8 ರಂದು ಭಾರತೀಯ ವಾಯುಪಡೆಯನ್ನು ಸ್ಥಾಪಿಸಲಾಯಿತು. ಭಾರತದ ಎಲ್ಲಾ ವಾಯುನೆಲೆಗಳಲ್ಲಿ ಭಾರತೀಯ ವಾಯುಪಡೆ ದಿನವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತದೆ.

Exit mobile version