Site icon PowerTV

3 ಮೇಕೆಗಳನ್ನು ತಿಂದು ತೇಗಿದ ನಾಯಿಗಳು!

ಬಾಗಲಕೋಟೆ : ಮೇಕೆಗಳ ಮೇಲೆ ದಾಳಿ ಮಾಡಿದ ನಾಯಿಗಳು ಅವುಗಳನ್ನು ಬಗೆದು ತಿಂದಿವೆ, ಮತ್ತೊಂದೆಡೆ ದೊಡ್ಡಿಯಲ್ಲಿ ಕಟ್ಟಿದ್ದ ಕುರಿಗಳನ್ನು ಯಾರೋ ದುರುಳರು ಕೊರಳು ಕತ್ತರಿಸಿ, ಹೊಟ್ಟೆ ಬಗೆದು ಸಾಯಿಸಿದ್ದಾರೆ. ಇಂಥ ಘಟನೆಗಳು ಬಾಗಲಕೋಟೆ ಮತ್ತು ಯಾದಗಿರಿಯಲ್ಲಿ ನಡೆದಿದೆ.

ಬಾಗಲಕೋಟೆ ನಗರದ ತರಕಾರಿ ಮಾರುಕಟ್ಟೆ ಬಳಿ ನಾಯಿಗಳು ಮೂರು ಮೇಕೆಗಳನ್ನು ಸಾಯಿಸಿವೆ. ಅವುಗಳಲ್ಲಿ ಒಂದರ ಮಾಂಸವನ್ನು ಸಂಪೂರ್ಣವಾಗಿ ತಿಂದು ತೇಗಿವೆ. ಸುಲ್ತಾನ್ ಮನಿಯಾರ್ ಎಂಬುವರಿಗೆ ಸೇರಿರುವ ಮೇಕೆಗಳು ಇವಾಗಿದ್ದು, ಮನೆ ಮುಂದಿನ ಶೆಡ್ ನಲ್ಲಿ ಕಟ್ಟಿದ್ದರು. ಅವುಗಳ ಮೇಲೆ ನಾಯಿಗಳು ದಾಳಿ ಮಾಡಿವೆ.

ಇದನ್ನೂ ಓದಿ: ಅಮ್ಮಾಪಟ್ಟಿಯಲ್ಲಿ ಸೂತಕದ ಛಾಯೆ : ಮೃತರ ಸಂಖ್ಯೆ 14ಕ್ಕೆ ಏರಿಕೆ!

ಸುಮಾರು 24 ಸಾವಿರ ಮೌಲ್ಯದ ಮೇಕೆಗಳು ಇವಾಗಿದ್ದು, ಶುಕ್ರವಾರವಷ್ಟೇ ಅವುಗಳನ್ನು ಸಂತೆಯಿಂದ ಖರೀದಿ ಮಾಡಿ ತರಲಾಗಿತ್ತು. ಮೇಕೆಗಳ ಮೇಲಿನ ಬೀದಿ ನಾಯಿಗಳ ದಾಳಿ CCTV ಕ್ಯಾಮರಾದಲ್ಲಿ ಸೆರೆಯಾಗಿದ್ದು, ಭಯಾನಕವಾಗಿದೆ.

Exit mobile version