Site icon PowerTV

ಪ್ರೀತಿ ನಿರಾಕರಿಸಿದ ಯುವತಿಯನ್ನು ಮಸಣಕ್ಕೆ ಕಳುಹಿಸಿದ್ನಾ ಪಾಪಿ!

ಚಿತ್ರದುರ್ಗ : ತನ್ನ ಪ್ರೇಮ ನಿವೇದನೆಯನ್ನು ಒಲ್ಲೆ ಎಂದ ಯುವತಿ ಮೇಲೆ ಪಾಗಲ್ ಪ್ರೇಮಿಯೊಬ್ಬ ಹಲ್ಲೆ ಮಾಡಿದ್ದು, ಚಿಕಿತ್ಸೆ ಫಲಕಾರಿಯಾಗದೆ ಯುವತಿ ಬಾರದ ಲೋಕದತ್ತ ಪಯಣ ಬೆಳೆಸಿದ್ದಾಳೆ.

ಚಿತ್ರದುರ್ಗ ಜಿಲ್ಲೆಯ ಹುಲ್ಲೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಅರ್ಪಿತಾ (19) ಮೃತ ದುರ್ದೈವಿ. ಇದೇ ಗ್ರಾಮದ ಅಜೇಯ್ ಆರೋಪಿ. ಈತ ಆಟೋ ಚಾಲಕ ಎಂದು ತಿಳಿದುಬಂದಿದೆ.

ಅಕ್ಟೋಬರ್ 3ರಂದು ಆರೋಪಿ ಅಜೇಯ್ ಯುವತಿ ಮೇಲೆ ಹಲ್ಲೆ ನಡೆಸಿದ್ದನು. ಬಳಿಕ ದಾವಣಗೆರೆ ಖಾಸಗಿ ಆಸ್ಪತ್ರೆಗೆ ಯುವತಿಯನ್ನು ದಾಖಲಿಸಿ ಪರಾರಿಯಾಗಿದ್ದನು. ಬಳಿಕ ಕುಟುಂಬಸ್ಥರು ಶಿವಮೊಗ್ಗ ಆಸ್ಪತ್ರೆಗೆ ದಾಖಲಿಸಿದ್ದರು. ನಿನ್ನೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿಯೇ ಅರ್ಪಿತಾ ಸಾವನ್ನಪ್ಪಿದ್ದಾರೆ.

Love Me ಅಂತ ಹಿಂದೆ ಬಿದ್ದಿದ್ದ

ವೃತ್ತಿಯಲ್ಲಿ ಚಾಲಕನಾಗಿದ್ದ ಆರೋಪಿ ಅಜೇಯ್​ ಅರ್ಪಿತಾ ಹಿಂದೆ ಬಿದ್ದಿದ್ದ. ಅಲ್ಲದೆ, ಯುವತಿ ಬಳಿ ನೀನು ನನಗೆ ಇಷ್ಟ ಆಗಿದ್ದೀಯ, ನನ್ನನ್ನು ಪ್ರೀತಿಸು ಎಂದು ಬೇಡಿಕೆ ಇಟ್ಟಿದ್ದನು. ಆದರೆ, ಈತನ ಪ್ರೇಮ ನಿವೇದನೆಯನ್ನು ನಿರಾಕರಿಸಿದ್ದರಿಂದ ಆರೋಪಿ ಕುಪಿತನಾಗಿದ್ದ. ಆಟೋದಲ್ಲಿ ಹುಲ್ಲೂರು ಅಪಹರಣ ಮಾಡಿ ಹುಲ್ಲೂರ ಗ್ರಾಮದ ಹೊರವಲಯಕ್ಕೆ ಕರೆದೊಯ್ದಿದ್ದ. ಆಮೇಲೆ ನಡೆದಿದ್ದೆಲ್ಲ ಅಮಾನವೀಯ.

ಅತ್ಯಾಚಾರ ಹಾಗೂ ಕೊಲೆ ಯತ್ನ

ನಿರ್ಜನ ಪ್ರದೇಶದಲ್ಲಿ ಈ ಪಾಪಿ ಯುವತಿಯನ್ನು ಹುರಿದು ಮುಕ್ಕಿದ್ದಾನೆ. ಒತ್ತಾಯಪೂರ್ವಕವಾಗಿ ಯುವತಿ ಮೇಲೆ ಅತ್ಯಾಚಾರ ಎಸಗಿ, ಹಲ್ಲೆ ಮಾಡಿ ಕೊಲೆಗೆ ಯತ್ನಿಸಿದ್ದಾನೆ. ಬಳಿಕ ಈತನೇ ದಾವಣಗೆರೆ ಖಾಸಗಿ ಆಸ್ಪತ್ರೆಗೆ ಅಡ್ಮಿಟ್ ಮಾಡಿ ಎಸ್ಕೇಪ್ ಆಗಿದ್ದಾನೆ. ಈ ಸಂಬಂಧ ಮೃತ ಅರ್ಪಿತಾ ಪೋಷಕರು ಚಿತ್ರದುರ್ಗ ಮಹಿಳಾ ಠಾಣೆಗೆ ದೂರು ನೀಡಿದ್ದಾರೆ. ಈ ಸಂಬಂಧ ಪೋಷಕರ ಹೇಳಿಕೆ ದಾಖಲಿಸಿಕೊಂಡ ಪೊಲೀಸರು ಆರೋಪಿ ಅಜೇಯ್​ ಮೇಲೆ ಅಪಹರಣ, ಅತ್ಯಾಚಾರ ಹಾಗೂ ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪಾಗಲ್ ಪ್ರೇಮಿಯ ಬಂಧನಕ್ಕೆ ಬಲೆ ಬೀಸಿದ್ದಾರೆ.

Exit mobile version