Site icon PowerTV

ಚಾಕುವಿನಿಂದ ಇರಿದು 13 ಕುರಿಗಳನ್ನು ಕೊಂದ ಕಿರಾತಕರು!

ಯಾದಗಿರಿ: ಕುರಿ ಹಟ್ಟಿಗೆ ನುಗ್ಗಿದ ದುಷ್ಕರ್ಮಿಗಳು 13 ಕುರಿಗಳಿಗೆ ಮನಬಂದಂತೆ ಚಾಕುವಿನಿಂದ ಇರಿದು ಕುರಿಗಳನ್ನು ಕೊಂದಿರುವಂತಹ ಘಟನೆ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಮಂಡಗಳ್ಳಿ ಗ್ರಾಮದಲ್ಲಿ ನಡೆದಿದೆ.

ಹಳೆ ವೈಷಮ್ಯದ ಹಿನ್ನೆಲೆ ಮನೆಯ ಮುಂಬಾಗದ ಹಟ್ಟಿಯೊಂದರಲ್ಲಿ ಇದ್ದ ಕುರಿಗಳನ್ನು ದುಷ್ಕರ್ಮಿಗಳು ಕೊಲೆಮಾಡಿದ್ದಾರೆ. ಮಲ್ಲಪ್ಪ ಎಂಬುವರು 50 ಕುರಿಗಳನ್ನು ಸಾಕಿದ್ದರು. ಬೆಳಗಿನ ಜಾವ ಏಕಾ ಏಕಿ ಕುರಿ ಹಟ್ಟಿಗೆ ನುಗ್ಗಿದ ಕಿರಾತಕರು ಕುರಿಗಳ ಕತ್ತು, ಹಾಗೂ ಹೊಟ್ಟೆ ಭಾಗಕ್ಕೆ ಮನಬಂದಂತೆ ದಾಳಿ ಮಾಡಿದ್ದಾರೆ. ಸುಮಾರು 5 ರಿಂದ 6 ಲಕ್ಷ ಬೆಲೆ ಬಾಳುವ 13 ಕುರಿಗಳನ್ನು ಸಾಯಿಸಿ ಪರಾರಿಯಾಗಿದ್ದಾರೆ.

ಇದನ್ನೂ ಓದಿ : ಮೇಕೆದಾಟು ಯೋಜನೆಗೆ ಆಗ್ರಹಿಸಿ ಪತ್ರ ಚಳುವಳಿ ಆರಂಭಿಸಿದ ಎಎಪಿ! 

ಇದೀಗ ಕುರಿಗಾಹಿ ಕುಟುಂಬಸ್ಥರು 13 ಕುರಿಗಳನ್ನು ಕಳೆದುಕೊಂಡು ಕಂಗಾಲಾಗಿದ್ದಾರೆ. ಶಹಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಇನ್ನು ದುಷ್ಕರ್ಮಿಗಳು ಉದ್ದೇಶಪೂರ್ವಕವಾಗಿ ಈ ಕೃತ್ಯ ಎಸಗಿದ್ದಾರೆ ಎಂದು ಆರೋಪ ವ್ಯಕ್ತಪಡಿಸಿದ್ದಾರೆ.

Exit mobile version