Site icon PowerTV

ಮೋದಿ ಮತ ಬೇಟೆಗಾರ : ಕಾಂಗ್ರೆಸ್ ವ್ಯಂಗ್ಯ

ಬೆಂಗಳೂರು : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ರಾವಣನಂತೆ ಬಿಂಬಿಸಿರುವ ಬಿಜೆಪಿಗೆ ರಾಜ್ಯ ಕಾಂಗ್ರೆಸ್​ ತಿರುಗೇಟು ನೀಡಿದೆ.

ಈ ಕುರಿತು Xನಲ್ಲಿ ಪೋಸ್ಟ್​ ಮಾಡಿರುವ ಕಾಂಗ್ರೆಸ್​, ಪ್ರಧಾನಿ ನರೇಂದ್ರ ಮೋದಿ ಮತ ಬೇಟೆಗಾರ ಎಂದು ಕುಟುಕಿದೆ. ಅಲ್ಲದೆ, ಮೋದಿ ಅವರ ಪೋಸ್ಟರ್​ ಅನ್ನು ಹಂಚಿಕೊಂಡಿದೆ.

ಪ್ರಧಾನಿ ಮೋದಿಯವರು, ಚುನಾವಣೆಯ ಸಂದರ್ಭದಲ್ಲಿ ಪ್ರತಿ ಮೂರು ದಿನಕ್ಕೊಮ್ಮೆ ಭೇಟಿ ನೀಡಿದ್ದೇನು? ಹತ್ತಾರು ಕಿಲೋಮೀಟರ್ ರೋಡ್ ಶೋ ಮಾಡಿದ್ದೇನು?| ಕನ್ನಡದಲ್ಲಿ ಡೈಲಾಗ್ ಹೊಡೆದಿದ್ದೇನು? ಕರ್ನಾಟಕವೇ ನನ್ನ ಕರ್ಮ ಭೂಮಿ ಎಂದಿದ್ದೇನು? ಆದರೀಗ ಕಾವೇರಿ ವಿಷಯದಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗುತ್ತಿದರೂ ಪತ್ತೆ ಇಲ್ಲ ಎಂದು ಕಿಡಿಕಾರಿದೆ.

ಈ ಸುದ್ದಿ ಓದಿದ್ದೀರಾ? : ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದು ಒಂದೇ ಕುಟುಂಬವಲ್ಲ, ಆ ಕುಟುಂಬದಿಂದ ದೇಶದ ಅಭಿವೃದ್ಧಿಯೂ ಆಗಿಲ್ಲ : ಮೋದಿ ಗುಡುಗು 

ಮೋದಿ ಕೆಲಸ ಮತ ಬೇಟೆ ಮಾತ್ರವೇ?

ಬರದಿಂದ ರಾಜ್ಯದ ಜನ ತತ್ತರಿಸಿದರೂ ಪ್ರಧಾನಿ ಮೋದಿ ಪತ್ತೆ ಇಲ್ಲ. ಕೇಂದ್ರ ಸರ್ಕಾರದ ಯೋಜನೆಗಳಿಗೆ ರಾಜ್ಯದ ಪಾಲಿನ ಹಣ ಕೊಡುವ ಸುದ್ದಿಯೇ ಇಲ್ಲ. ಪ್ರಧಾನಿ ಮೋದಿಯವರ ಕೆಲಸ ಮತ ಬೇಟೆ ಮಾತ್ರವೇ?ಎಂದು ಕಾಂಗ್ರೆಸ್​ ವಾಗ್ದಾಳಿ ನಡೆಸಿದೆ.

Exit mobile version