Site icon PowerTV

ಜೆಸಿಬಿ ಡಿಸೇಲ್ ಜನರೇಟರ್ ಅನಾವರಣಗೊಳಿಸಿದ ಮಾಜಿ ಸಿಎಂ ಬೊಮ್ಮಾಯಿ

ಬೆಂಗಳೂರು: ಜೆಸಿಬಿ ಪವರ್ ಪ್ರೊಡಕ್ಟ್ಸ್ ಹೊರ ತಂದಿರುವ ವಿಶ್ವ ದರ್ಜೆಯ ಡಿಸೇಲ್ ಜನರೇಟರನ್ನು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಅನಾವರಣಗೊಳಿಸಿದರು.

ಇದನ್ನೂ ಓದಿ: ಮರಕ್ಕೆ ನೇಣುಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ!

ಬೆಂಗಳೂರಿನ ಮ್ಯಾಗ್ನಾಟೆಕ್ ಕಂಪನಿ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಬೊಮ್ಮಾಯಿ ಅನಾವರಣಗೊಳಿಸಿದರು. ಇದು ವಿಶ್ವದ ಐದು ಖಂಡಗಳ ವ್ಯಾಪ್ತಿಯಲ್ಲಿ ಭಾರತದಲ್ಲಿ ತಯಾರಾದ ಅತ್ಯುನ್ನತ ದರ್ಜೆಯ ಪ್ರಥಮ ಡಿಸೇಲ್ ಜನರೇಟರ್ ಇದಾಗಿದೆ. ಇದನ್ನು ಭಾರತದ ಹರಿಯಾಣದ ಬಾಲಬಾಗರಹದಲ್ಲಿ ತಯಾರಿಸಲಾಗುತ್ತಿದ್ದು, ಬೆಂಗಳೂರಿನ ಮ್ಯಾಗ್ನಾಟೆಕ್ ಎಂಜನೀಯರ್ಸ್ ನಲ್ಲಿ ಲಭ್ಯವಿರಲಿದೆ.

ಕಾರ್ಯಕ್ರಮದಲ್ಲಿ ಜೆಸಿಬಿ ಪವರ್ ಪ್ರೊಡಕ್ಟ್ ನ ಮುಖ್ಯಸ್ಥರಾದ ಅತುಲ್ ಕಠಾರಿಯಾ, ಮ್ಯಾಗ್ನಾಟೆಕ್ ಎಂಡಿ ಹಾಗೂ ಸಿಇಒ ಭರತ್ ಬೊಮ್ಮಾಯಿ ಹಾಜರಿದ್ದರು.

Exit mobile version