Site icon PowerTV

Holidays..! ನಾಳೆಯಿಂದ ಶಾಲೆಗಳಿಗೆ ದಸರಾ ರಜೆ

ಬೆಂಗಳೂರು : ದಸರಾ ಬಂದೇ ಬಿಡ್ತು.. ಮಕ್ಕಳಿಗೆ ರಜೆ ಇಲ್ಲ ಅಂದ್ರೆ ಹೇಗೆ? ಅಕ್ಟೋಬರ್ 8 (ನಾಳೆಯಿಂದ) ರಿಂದ 24 ರವರೆಗೆ ದಸರಾ ರಜೆ, ಏಪ್ರಿಲ್ 11 ರಿಂದ ಮೇ 28 ರವರೆಗೆ ಶಾಲೆಗಳಿಗೆ ಇರಲಿದೆ ಬೇಸಿಗೆ ರಜೆ.

ಶಿಕ್ಷಣ ಇಲಾಖೆಯ ಶೈಕ್ಷಣಿಕ ವೇಳಾಪಟ್ಟಿ ಪ್ರಕಾರ ರಾಜ್ಯದ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಪರೀಕ್ಷೆಗಳು ಇಂದು (ಅಕ್ಟೋಬರ್ 7) ಮುಕ್ತಾಯಗೊಳ್ಳಲಿವೆ. ಇಂದಿಗೆ ಮೊದಲನೇ ಅವಧಿಯ ಶಾಲಾ ದಿನಗಳು ಮುಗಿಯಲಿದ್ದು, ನಾಳೆಯಿಂದ ಅಕ್ಟೋಬರ್ 24ರವರೆಗೆ ದಸರಾ ರಜೆ ಇರಲಿದೆ.

ಕೊಡಗು ಜಿಲ್ಲೆಯ ಶಾಲೆಗಳಿಗೆ ಅಕ್ಟೋಬರ್ 10ರಿಂದ 25ರವರಗೆ ದಸರಾ ರಜೆ ಘೋಷಿಸಲಾಗಿದೆ. ಮೊದಲಿನ ರಜೆಯನ್ನು ಮಾರ್ಪಡಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ರಾಜ್ಯ ವಿಶೇಷ ಶಾಲಾ ಮಕ್ಕಳಿಗೆ ರದ್ದು ಪಡಿಸಿದ್ದ ದಸರಾ ಹಾಗೂ ಬೇಸಿಗೆ ರಜೆಯ ಆದೇಶವನ್ನು ಹಿಂಪಡೆದು, ಎಂದಿನಂತೆ ರಜೆ ಘೋಷಣೆ ಮಾಡಲಾಗಿದೆ.

ಇನ್ನೂ ಶೀಕ್ಷಣ ಇಲಾಖೆಯ ಈ ಆದೇಶದಿಂದ ಸರ್ಕಾರಿ, ಅನುದಾನಿತ, ಶಿಶುಕೇಂದ್ರಿತ ಯೋಜನೆಯ 164 ಶಾಲೆಗಳ 3,600 ಬೋಧಕೇತರ ಸಿಬ್ಬಂದಿ, 5500 ವಿಶೇಷ ಶಿಕ್ಷಕರಿಗೆ ರಜಾ ಸೌಲಭ್ಯ ಸಿಕ್ಕಿದೆ.

Exit mobile version