Site icon PowerTV

ಕುಂಕುಮ, ಕೇಸರಿ ಪೇಟ ಬೇಡ ಅಂತಾರೆ, ಮುಸ್ಲಿಮರ ಟೋಪಿ ಖುಷಿಯಾಗಿ ಹಾಕ್ಕೊಳ್ತಾರೆ : ಸಿ.ಟಿ. ರವಿ

ಬೆಂಗಳೂರು : ಅಸಲಿ ಹಿಂದೂಗಳು ಕುಂಕುಮ, ಕೇಸರಿ ಪೇಟ ಬೇಡ ಅಂತಾರೆ. ಮುಸ್ಲಿಮರ ಟೋಪಿಯನ್ನು ಖುಷಿಯಿಂದ ಹಾಕಿಕೊಳ್ಳುತ್ತಾರೆ ಎಂದು ಕಾಂಗ್ರೆಸ್ಸಿಗರನ್ನು ಮಾಜಿ ಸಚಿವ ಸಿ.ಟಿ. ರವಿ ಲೇವಡಿ ಮಾಡಿದ್ದಾರೆ.

ಬಿಜೆಪಿಯವರು ನಕಲಿ ಹಿಂದೂಗಳು ಎಂಬ ಕಾಂಗ್ರೆಸ್ಸಿಗರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಅವರು, ಹೌದು.. ನಾವು ನಕಲಿ ಹಿಂದೂಗಳು. ಹೀಗಾಗಿಯೇ ಹಣೆಗೆ ತಿಲಕ ಇಟ್ಟುಕೊಳ್ಳುತ್ತೇವೆ. ಕೇಸರಿ ಪೇಟ ತೊಟ್ಟುಕೊಳ್ಳುತ್ತೇವೆ. ಕಾಂಗ್ರೆಸ್​ ನಾಯಕರಿಗೆ ಕೇಸರಿ ಅಂದ್ರೆ ಆಗಲ್ಲ. ಇಂತಹವರು ನಾಳೆ ಒಸಾಮ ಬಿನ್ ಲಾಡೆನ್ ಪರವಾಗಿ ಮಾತನಾಡಿದರೂ ಆಶ್ಚರ್ಯವಿಲ್ಲ ಎಂದು ಕುಟುಕಿದ್ದಾರೆ.

ಈ ಸುದ್ದಿ ಓದಿದ್ದೀರಾ? : ಸಿದ್ದರಾಮಯ್ಯ ಮಹಿಳಾಪ್ರಿಯ ಮುಖ್ಯಮಂತ್ರಿ : ಲಕ್ಷ್ಮಿ ಹೆಬ್ಬಾಳ್ಕರ್

ಶಿವಮೊಗ್ಗ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲ್ಲು ತೂರಿದವರನ್ನು ಹಾಗೂ ಕಲ್ಲೇಟು ತಿಂದವರನ್ನು ಒಂದೇ ತಕ್ಕಡಿಯಲ್ಲಿ ತೂಗುತ್ತಾರೆ. ಈ ಮೂಲಕ ಕಾಂಗ್ರೆಸ್ ಸರ್ಕಾರ ಮಾರ್ಜಾಲ ನ್ಯಾಯ ಅನುಸರಿಸುತ್ತಿದೆ. ಈದ್ ಮಿಲಾದ್ ಮೆರವಣಿಗೆಯಲ್ಲಿ ಔರಂಗಜೇಬ್, ಟಿಪ್ಪು ಸುಲ್ತಾನ್ ಫೋಟೋ ಹಾಕಲು ಅವಕಾಶ ಕೊಟ್ಟಿದ್ದೇ ತಪ್ಪು. ಪ್ರಕರಣದಲ್ಲಿ ಮತಾಂಧರ ವಿರುದ್ಧ ಕ್ರಮ ಕೈಗೊಳ್ಳದೆ, ದೌರ್ಜನ್ಯಕ್ಕೊಳಗಾದವರಿಗೆ ಕಿರುಕುಳ ನೀಡುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ ಎಂದು ಆರೋಪ ಮಾಡಿದ್ದಾರೆ.

Exit mobile version