Site icon PowerTV

ಏಷ್ಯನ್ ಗೇಮ್ಸ್ : ‘ಚಿನ್ನ’ಕ್ಕಾಗಿ ಭಾರತ-ಅಫ್ಘಾನಿಸ್ತಾನ ಫೈಟ್

ಬೆಂಗಳೂರು : ಏಷ್ಯನ್​ ಗೇಮ್ಸ್​-2023ರ ಪುರುಷರ ಕ್ರಿಕೆಟ್​ನ ಫೈನಲ್ (ಚಿನ್ನದ) ಪಂದ್ಯ ಇಂದು ನಡೆಯಲಿದ್ದು, ಭಾರತ ತಂಡ ಹಾಗೂ ಅಫ್ಘಾನಿಸ್ತಾನ ತಂಡ ಬಂಗಾರಕ್ಕಾಗಿ ಸೆಣಸಲಿವೆ.

ಹ್ಯಾಂಗ್‌ಝೌನಲ್ಲಿರುವ ಪಿಂಗ್‌ಫೆಂಗ್ ಕ್ಯಾಂಪಸ್ ಕ್ರಿಕೆಟ್ ಫೀಲ್ಡ್‌ನಲ್ಲಿ ಇಂದು ಬೆಳಗ್ಗೆ 10.30ಕ್ಕೆ ಫೈನಲ್ ಪಂದ್ಯ ನಡೆಯಲಿದ್ದು ಋತುರಾಜ್​​ ಸಾರಥ್ಯದ ಬ್ಲೂ ಬಾಯ್ಸ್​ ಚಿನ್ನದ ಪದಕ ಗೆಲ್ಲುವ ತವಕದಲ್ಲಿದ್ದಾರೆ. ಪಾಕಿಸ್ತಾನ ತಂಡವನ್ನೇ ಬಗ್ಗುಬಡಿದಿರುವ ಅಫ್ಘಾನಿಸ್ತಾನ ಭಾರತಕ್ಕೆ ಶಾಕ್​ ಕೊಡಲು ಸಿದ್ಧತೆ ನಡೆಸಿದೆ.

ಋತುರಾಜ್ ಬಳಗ ಪದಕ ಗೆಲ್ಲುವ ಫೇವರಿಟ್​ ಆಗಿದೆ. ಇನ್ನೂ ಇಂದಿನ ಪಂದ್ಯದಲ್ಲಿ ಸ್ಪಿನ್ನರ್ ಶಹಬಾಜ್​ ಅಹಮ್ಮದ್ ಸ್ಥಾನಕ್ಕೆ ವೇಗಿ ಅವೇಶ್​ ಖಾನ್​ ಕಣಕ್ಕಿಳಿಯುವ ಸಾಧ್ಯತೆಯಿದೆ. ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಫೈನಲ್ ಪಂದ್ಯವನ್ನು ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ.

ಭಾರತ ತಂಡ

ರುತುರಾಜ್ ಗಾಯಕ್ವಾಡ್(ನಾಯಕ), ಯಶಸ್ವಿ ಜೈಸ್ವಾಲ್, ತಿಲಕ್ ವರ್ಮಾ, ಜಿತೇಶ್ ಶರ್ಮಾ, ಶಿವಂ ದುಬೆ, ರಿಂಕು ಸಿಂಗ್, ವಾಷಿಂಗ್ಟನ್ ಸುಂದರ್, ಶಹಬಾಜ್ ಅಹ್ಮದ್, ರವಿ ಬಿಷ್ಣೋಯ್, ರವಿಶ್ರೀನಿವಾಸನ್ ಸಾಯಿ ಕಿಶೋರ್, ಅರ್ಷದೀಪ್ ಸಿಂಗ್, ರಾಹುಲ್ ತ್ರಿಪಾಠಿ, ಅವೇಶ್ ಖಾನ್, ಮುಖೇಶ್ ಕುಮಾರ್, ಪ್ರಭಸಿಮ್ರಾನ್ ಸಿಂಗ್, ಆಕಾಶ್ ದೀಪ್

ಅಫ್ಘಾನಿಸ್ತಾನ ತಂಡ

ಗುಲ್ಬದಿನ್ ನೈಬ್(ನಾಯಕ), ಸೇದಿಕುಲ್ಲಾ ಅಟಲ್, ಮೊಹಮ್ಮದ್ ಶಹಜಾದ್, ನೂರ್ ಅಲಿ ಜದ್ರಾನ್, ಶಾಹಿದುಲ್ಲಾ ಕಮಾಲ್, ಅಫ್ಸರ್ ಝಜೈ, ಕರೀಂ ಜನತ್, ಶರಫುದ್ದೀನ್ ಅಶ್ರಫ್, ಖೈಸ್ ಅಹ್ಮದ್, ಫರೀದ್ ಅಹ್ಮದ್ ಮಲಿಕ್, ಜಹೀರ್ ಖಾನ್, ಸೈಯದ್ ಶಿರ್ಜಾದ್, ನಿಜಾತ್ ಮಸೂದ್, ನಿಜಾತ್ ಮಸೂದ್, ವಫಿವುಲ್ಲಾ ತಾರಖಿಲ್

Exit mobile version