Site icon PowerTV

‘ಪ್ಲಾಸ್ಟಿಕ್‌ ಮುಕ್ತ’ ಮೈಸೂರು ದಸರಾಗೆ ಸಿದ್ಧತೆ!

ಮೈಸೂರು: ನಾಡಹಬ್ಬ ದಸರಾ ಮಹೋತ್ಸವವನ್ನು ಈ ಬಾರಿ ಪರಿಸರ ಸ್ನೇಹಿ ಹಾಗೂ ಪ್ಲಾಸ್ಟಿಕ್‌ ಮುಕ್ತವಾಗಿ ಆಚರಿಸಲು ಜಿಲ್ಲಾಡಳಿತ ಸಿದ್ಧತೆ ನಡೆಸಿದೆ.

ದಸರಾ ಸಂದರ್ಭದಲ್ಲಿ ಹೆಚ್ಚಿನ ಪ್ರವಾಸಿಗರು ಮೈಸೂರಿನ ನಾನಾ ಪ್ರವಾಸಿ ತಾಣಗಳಿಗೆ ಭೇಟಿ ನೀಡುತ್ತಾರೆ. ವಿವಿಧ ಮಳಿಗೆ, ಅಂಗಡಿ ಮುಂಗಟ್ಟು, ದಸರಾ ಕಾರ‍್ಯಕ್ರಮ ನಡೆಯುವ ಸ್ಥಳ, ಆಹಾರ ಮೇಳ, ಯುವ ದಸರಾ, ಚಾಮುಂಡಿಬೆಟ್ಟ, ಅರಮನೆ ಹಾಗೂ ಪ್ರಮುಖ ಬೀದಿ ಬದಿಯಲ್ಲಿಉತ್ಪಾದನೆಯಾಗುವ ಕಸದಲ್ಲಿ ಪ್ಲಾಸ್ಟಿಕ್‌ ಪ್ರಮಾಣವೇ ಹೆಚ್ಚಿರುತ್ತದೆ.

ಇದನ್ನೂ ಓದಿ: ಮೆಟ್ರೋ ಟ್ರೈನ್​ನಲ್ಲಿ ಗೋಬಿ ಸೇವಿಸಿದ ಪ್ರಯಾಣಿಕ: 500 ರೂ.ದಂಡ ವಸೂಲಿ!

ಇದನ್ನು ಗಮನದಲ್ಲಿಟ್ಟುಕೊಂಡು ಈ ಸಲ ಪ್ಲಾಸ್ಟಿಕ್‌ಗೆ ಬ್ರೇಕ್‌ ಹಾಕಿ ಪರಿಸರ ಸ್ನೇಹಿ ದಸರಾ ಆಚರಿಸಲು ಜಿಲ್ಲಾಡಳಿತ ಸಜ್ಜಾಗಿದೆ. ದಸರೆಯನ್ನು ಪರಿಸರ ಸ್ನೇಹಿಯಾಗಿ ಆಚರಿಸಲು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಅವರು ಈಗಾಗಲೇ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

Exit mobile version