Site icon PowerTV

ಮೆಟ್ರೋ ಟ್ರೈನ್​ನಲ್ಲಿ ಗೋಬಿ ಸೇವಿಸಿದ ಪ್ರಯಾಣಿಕ: 500 ರೂ.ದಂಡ ವಸೂಲಿ!

ಬೆಂಗಳೂರು : ನಮ್ಮ ಮೆಟ್ರೋ ಪ್ರಯಾಣಿಕನಿಂದ ಮೆಟ್ರೋ ಸಿಬ್ಬಂದಿಗಳು 500ರೂ ದಂಡ ವಸೂಲಿ ಮಾಡಿರುವ ಘಟನೆ ನಗರದ ಜಯನಗರ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ನಮ್ಮ ಮೆಟ್ರೋದ ನಿಯಮಗಳನ್ನು ಮೀರಿ ಮೆಟ್ರೋದಲ್ಲಿ ಪ್ರಯಾಣಿಸುವ ವೇಳೆ ಗೋಬಿ ಮಂಚೂರಿಯನ್ನು ಸೇವಿಸಿ  ಉದ್ದಟತನ ಮೆರೆದಿದ್ದಾನೆ. ಈತ ಜಯನಗರದ ಪ್ರತಿಷ್ಠಿತ ಆಭರಣ ಮಳಿಗೆ ಉದ್ಯೋಗಿ ಸುನೀಲ್‌ ಕುಮಾರ್ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಮಕ್ಕಳ ಆಹಾರ ಕಿಟ್​ ಮಾರಾಟ: ಸಿಬ್ಬಂದಿ ಅಮಾನತು!

ಪ್ರತಿದಿನ ಸಂಪಿಗೆ ಮೆಟ್ರೋ ರೋಡ್ ಮೆಟ್ರೋ ನಿಲ್ದಾಣದಿಂದ ಪ್ರಯಾಣ ಮಾಡ್ತಿದ್ದ ಸುನೀಲ್, ಎಂದಿನಂತೆ ನಿಲ್ದಾಣಕ್ಕೆ ಬಂದಾಗ ಆತನನ್ನು ತಡೆದು, ತರಾಟೆಗೆ ತೆಗೆದುಕೊಂಡ BMRCL ಅಧಿಕಾರಿಗಳು ಮತ್ತು ಭದ್ರತಾ ಸಿಬ್ಬಂದಿಗಳು 500 ದಂಡ ವಿಧಿಸಿ ಜಯನಗರ ಪೊಲೀಸ್ ಠಾಣೆಗೆ ಕರೆದೊಯ್ದು ಮಧ್ಯಾಹ್ನದ ವರೆಗೆ ಠಾಣೆಯಲ್ಲಿ ಕೂರಿಸಿಕೊಂಡು ಮುಂದೆ ಈ ರೀತಿ ವರ್ತಿಸದಂತೆ ಎಚ್ಚರಿಕೆ ನೀಡಿ ಕಳಿಸಿದ್ದಾರೆ.

Exit mobile version