Site icon PowerTV

ನಾವು ಹೇಳಿಕೆ ಕೊಟ್ರೆ ಬ್ರೇಕಿಂಗ್ ನ್ಯೂಸ್ ಆಗಲಿದೆ ಅಂದ್ಕೊಂಡಿದ್ದಾರೆ : ಸದಾನಂದಗೌಡ

ಬೆಂಗಳೂರು : ರಾಹುಲ್ ಗಾಂಧಿ ಅವರನ್ನು ರಾವಣನಿಗೆ ಹೋಲಿಸಿದ್ದಕ್ಕೆ ಬಿಜೆಪಿಯಲ್ಲಿ ಕೀಚಕ, ಮಾರೀಚ ಮತ್ತಿತರಿದ್ದಾರೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಲೇವಡಿ ಮಾಡಿದ್ದಾರೆ. ಈ ಬಗ್ಗೆ ಮಾಜಿ ಸಿಎಂ ಡಿ.ವಿ. ಸದಾನಂದಗೌಡ ಪ್ರತಿಕ್ರಿಯಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಹೇಳಿಕೆ ಕೊಟ್ಟ ಕೂಡಲೇ ಬ್ರೇಕಿಂಗ್‌ ನ್ಯೂಸ್ ಆಗಲಿದೆ ಅಂತ ಬಾವಿಸಿದ್ದಾರೆ. ಅದಕ್ಕಾಗಿಯೇ ಕೆಲವರಿದ್ದಾರೆ ಎಂದು ತಿರುಗೇಟು ಕೊಟ್ಟಿದ್ದಾರೆ.

ನಮ್ಮ ಹೇಳಿಕೆಯೇ ಭವಿಷ್ಯ ನಿರ್ಧಾರ ಆಗಲಿದೆ ಅಂದುಕೊಂಡಿದ್ದಾರೆ. ಎಲ್ಲಾ ಪಕ್ಷಗಳಲ್ಲಿ ಇಂತವರಿದ್ದಾರೆ, ನಮ್ಮ ಪಕ್ಷ ಹೊರತು ಅಂತ‌ ಹೇಳಲ್ಲ. ಎಲ್ಲರಿಗೂ ವಿನಂತಿ ಮಾಡ್ತೀನಿ. ಸಾಮಾಜಿಕ ಜೀವನದಲ್ಲಿ ವ್ಯಕ್ತಿಯ ಚಾರಿತ್ರ ಹರಣ ಮಾಡುವ ಕೆಲಸ ಮಾಡಬಾರದು. ಸಾಮಾಜಿಕ ಜಾಲತಾಣ, ಎಲೆಕ್ಟ್ರಾನಿಕ್ ಮೀಡಿಯಾಗಳಲ್ಲಿ ಹೇಳಿಕೆ ಕೊಡೋದು ಕಡಿಮೆಯಾದ್ರೆ ಒಳ್ಳೆಯದು ಎಂದು ಹೇಳಿದ್ದಾರೆ.

ಎಲ್ಲದಕ್ಕೂ ಇತಿ ಮಿತಿ ಇದೆ

ಈ ವೈಯಕ್ತಿಕ ಆರೋಪ, ದೋಷಾರೋಪಗಳು ರಾಜಕಾರಣದಲ್ಲಿ ಹೆಚ್ಚುತ್ತಿದೆ. ವ್ಯಕ್ತಿಯ ಚಾರಿತ್ರ ಹರಣದ ಮೂಲಕವೇ ರಾಜಕಾರಣ ಬೆಳೆಸ್ತೇವೆ ಅನ್ನೋ ಪ್ರವೃತ್ತಿ ಹೆಚ್ಚಾಗಿದೆ. ರಾಜಕಾರಣದಲ್ಲಿ ಒಂದು ರೀತಿ ಸಾಮಾಜಿಕ ವ್ಯವಸ್ಥೆ ಅದಃಪತನ ಆಗಲಿದೆ. ಆಡಳಿತ ನಡೆಸುವವರ ವಿರುದ್ಧ ಜವಾಬ್ದಾರಿ ಇರೋರ ಜೊತೆಯಲ್ಲಿ ಟೀಕೆ ಟಿಪ್ಪಣಿ ಸರಿ. ಆದ್ರೆ, ಅದಕ್ಕೂ ಇತಿ ಮಿತಿ ಇದೆ. ಇತಿ ಮಿತಿ ಮೀರಿ ಬೆಳೆಯುತ್ತಿರುವ ವಿಚಾರ, ಇದು ಭವಿಷ್ಯದಲ್ಲಿ ಯುವ ಜನಾಂಗದ ಮೇಲೆ ಖಂಡಿತ ದುಷ್ಪಪರಿಣಾಮ ಬೀರಲಿದೆ ಎಂದು ಸದಾನಂದಗೌಡ ಬೇಸರ ವ್ಯಕ್ತಪಡಿಸಿದ್ದಾರೆ.

Exit mobile version