Site icon PowerTV

ದಳಪತಿ ವಿಜಯ್​ ಅಭಿನಯದ ಲಿಯೋ ಚಿತ್ರದ ಟ್ರೈಲರ್ ಔಟ್!

ಅಭಿಮಾನಿಗಳಲ್ಲಿ ಬಾರಿ ನಿರೀಕ್ಷೆ ಮೂಡಿಸಿದ್ದ ದಳಪತಿ ವಿಜಯ್ ಅಭಿನಯದ ಲಿಯೋ ಟ್ರೈಲರ್​ ಬಿಡುಗಡೆಯಾಗಿದ್ದು ವಿಜಯ್ ಅಭಿಮಾನಿಗಳಿಗಂತೂ ಟ್ರೈಲರ್ ಹಬ್ಬ ಆಗಿದೆ.

ಲೋಕೇಶ್ ಕನಕರಾಜ್ ನಿರ್ದೇಶನದ ಲಿಯೋ ತಮಿಳು ಸಿನಿಮಾ ಭಾರೀ ಸದ್ದು ಮಾಡುತ್ತಿದ್ದು ಲಿಯೋ ಸಿನಿಮಾ ಇದೇ ತಿಂಗಳು 19 ರಂದು ತೆರೆಗೆ ಅಪ್ಪಳಿಸಲು ಸಿದ್ದವಾಗಿದ್ದು, ಈಗ ಟ್ರೈಲರ್ ಜೋರು ಹವಾ ಸೃಷ್ಟಿಸಿದೆ. ಈ ಸಿನಿಮಾಗೆ ಸೆನ್ಸಾರ್ ಮಂಡಳಿ U/A ಸರ್ಟಿಫಿಕೇಟ್ ನೀಡಿದೆ. ಅಕ್ಟೋಬರ್ 5 ರಂದು ‘ಲಿಯೋ’ ನಿರ್ಮಾಪಕರು ಬೃಹತ್ ಆಚರಣೆಗಳ ನಡುವೆ ಚಿತ್ರದ ಟ್ರೈಲರ್ ಅನ್ನು ಅನಾವರಣಗೊಳಿಸಿದರು.

ಇದನ್ನು ಓದಿ: ನಟ ದರ್ಶನ್ ಜೊತೆಗೆ ಮನಸ್ತಾಪ: ಮೌನ ಮುರಿದ ದ್ರುವ ಸರ್ಜಾ! 

ಸನ್ ಟಿವಿಯ ಅಧಿಕೃತ ಪುಟಗಳಲ್ಲಿ ಟ್ರೈಲರ್ ಬಿಡುಗಡೆಯಾಗಿದ್ದು, ಭಾರೀ ಸದ್ದು ಮಾಡುತ್ತಿದೆ. ಲಿಯೋ ಟ್ರೈಲರ್ ಧಮಾಕ ಆಗಿದ್ದು, ಅರ್ಜುನ್ ಸರ್ಜಾ, ಸಂಜಯ್ ದತ್, ತ್ರಿಷಾ ಕೃಷ್ಣನ್ ಅವರನ್ನು ಕಾಣಬಹುದು. ಟ್ರೈಲರ್ ಮಾತ್ರ ಸಖತ್ ಆಗಿದ್ದು, ಸಿನಿಮಾದ ಮೇಲೆ ಇನ್ನಷ್ಟು ನಿರೀಕ್ಷೆ ಮೂಡುವಂತೆ ಮಾಡಿದೆ.

Exit mobile version