Site icon PowerTV

ನಿಮಗೆ ಇಷ್ಟ ಇದ್ರೆ ಮುಂದಿನ ಬಾರಿ ಗೆಲ್ಸಿ ಇಲ್ಲಾ ಬಿಡಿ : ಶಾಸಕ ವೀರೇಂದ್ರ ಪಪ್ಪಿ ಗರಂ

ಚಿತ್ರದುರ್ಗ : ಹೆಂಡ್ತಿ ಮಕ್ಕಳನ್ನ ಬಿಟ್ಟು ಸೇವೆ ಮಾಡಿ ಅಂದ್ರೆ ಹೆಂಗೆ, ಅಂಥ ದೊಡ್ಡ ಗುಣಾನೂ ನಂದಲ್ಲ, ನಾನದನ್ನ ಮಾಡಲ್ಲ. ನನಗದು ಬೇಕಾಗಿಲ್ಲ ಎಂದು ಶಾಸಕ ವೀರೇಂದ್ರ ಪಪ್ಪಿ ಹೇಳಿದ್ದಾರೆ.

ಚಿತ್ರದುರ್ಗ ಕವಾಡಿಗರಹಟ್ಟಿಯಲ್ಲಿ ಮಾತನಾಡಿದ ಅವರು, ನಾನು ರಾಜಕೀಯದಲ್ಲಿ ಹಂಗಾಗಬೇಕು, ಹಿಂಗಾಗಬೇಕು ಅಂತ ಬಂದಿಲ್ಲ. ಬಂದಿನಿ ಸೇವೆ ಮಾಡ್ತೀದೀನಿ ಅಷ್ಟೇ. ನಿಮಗೆ ಇಷ್ಟ ಇದ್ರೆ ಮುಂದಿನ ಬಾರಿ ಗೆಲ್ಸಿ. ಇಲ್ಲ ಅಂದ್ರೆ ಬಿಡಿ.

ಇದನ್ನೂ ಓದಿ: ವಿಶ್ವಕಪ್​ ಕ್ರಿಕೆಟ್​ಗೆ ಉಗ್ರರ ಬೆದರಿಕೆ : ಎಲ್ಲಾ ಸ್ಟೇಡಿಯಂಗಳಿಗೂ ಭದ್ರತೆಗೆ ಸೂಚನೆ!

ನನಗೆ ಮತ ಹಾಕಿ ಗೆಲ್ಲಿಸಿ ಅಂತಾನೂ ಕೇಳೋದಿಲ್ಲ. ನನಗೆ ನಿಮ್ಮಿಂದ ಆಗಬೇಕಾಗಿದ್ದು ಏನೂ ಇಲ್ಲ. ನನ್ನ ಫ್ಯಾಮಿಲಿ ಬಗ್ಗೆ ನೀವು ಮಾತನಾಡಬೇಕಾದ್ರೆ ಬಹಳ ಯೋಚನೆ ಮಾಡಿ ಮಾತಾಡ್ಬೇಕು. ನಿಮ್ಮಿಂದ ನನಗೆ ನೋವಾಗಿದೆ, ನನ್ನಿಂದ ನಿಮಗೆ ತೊಂದರೆಯಾಗಿಲ್ಲ. ನನ್ನಿಂದ ನಿಮಗೆ ತೊಂದರೆಯಾಗಿದ್ರೆ ನಿಮ್ಮ ಮಾತನ್ನು ಒಪ್ಪಿಕೊಳ್ಳುತ್ತಿದ್ದೆ ಎಂದು ಪುಲ್ ಗರಂ ಆದರು.

Exit mobile version