Site icon PowerTV

ಬಿಎಂಟಿಸಿಯಲ್ಲಿ 17 ಕೋಟಿ ಗೋಲ್‌ಮಾಲ್‌ : ಅಧಿಕಾರಿ ಬಂಧನ!

ಬೆಂಗಳೂರು : ಬಿಎಂಟಿಸಿಗೆ ಸೇರಬೇಕಾದ 17 ಕೋಟಿ ರೂ. ದುರ್ಬಳಕೆ ಪ್ರಕರಣದ ತನಿಖೆ ಚುರುಕುಗೊಳಿಸಿರುವ ವಿಲ್ಸನ್‌ ಗಾರ್ಡನ್‌ ಠಾಣೆ ಪೊಲೀಸರು, ಬಿಎಂಟಿಸಿಯ ಹಿಂದಿನ ಮುಖ್ಯ ಸಂಚಾರ ವ್ಯವಸ್ಥಾಪಕ ಶ್ರೀರಾಮ್‌ ಮುಲ್ಕವಾನ್‌ರನ್ನು ಬಂಧಿಸಿದ್ದಾರೆ.

2020ರ ಮಾರ್ಚ್ ಹಾಗೂ 2023ರ ಅಕ್ಟೋಬರ್‌ ನಡುವಣ ಅವಧಿಯಲ್ಲಿ ಬಿಎಂಟಿಸಿ ಡಿಪೋಗಳಲ್ಲಿ ವಾಣಿಜ್ಯ ಮಳಿಗೆಗಳ ಟೆಂಡರ್‌, ಸ್ವಚ್ಛತಾ ನಿರ್ವಹಣೆ ಟೆಂಡರ್‌ ನೀಡಿಕೆಯಲ್ಲಿ ಹಿರಿಯ ಅಧಿಕಾರಿಗಳ ಸಹಿಗಳನ್ನು ನಕಲು ಮಾಡಿ ವಂಚನೆ ಎಸಗಲಾಗಿತ್ತು.

ಇದನ್ನೂ ಓದಿ: ಅನುಕಂಪ ನೌಕರಿ ಪಡೆಯಲು ವಿವಾಹಿತ ಪುತ್ರಿ ಅರ್ಹಳಲ್ಲ: ಹೈಕೋರ್ಟ್​

ಈ ಕುರಿತು ಬಿಎಂಟಿಸಿ ವಿಚಕ್ಷಣಾ ದಳ ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದ್ದು, ಪ್ರಮುಖ ಆರೋಪಿ ಶ್ರೀರಾಮ್‌ ಮುಲ್ಕವಾನ್‌ರನ್ನು ಬಂಧಿಸಲಾಗಿದೆ. ಕೇಸ್‌ನಲ್ಲಿ ಭಾಗಿಯಾಗಿರುವ ಆರು ಮಂದಿ ಅಧಿಕಾರಿಗಳ ಪಾತ್ರದ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Exit mobile version