Site icon PowerTV

ಅರೆ ಹುಚ್ಚನ್ನ ಪ್ರಧಾನಿ ಮಾಡಲು ಈ ಹುಚ್ಚರು ಕುಣಿಯುತ್ತಿದ್ದಾರೆ : ಯತ್ನಾಳ್

ಬೆಂಗಳೂರು : ಒಬ್ಬ ಅರೆ ಹುಚ್ಚನನ್ನು(ರಾಹುಲ್ ಗಾಂಧಿ) ಪ್ರಧಾನಿ ಮಾಡಲು ಈ ಹುಚ್ಚರು (I.N.D.I.A ಒಕ್ಕೂಟ) ಕುಣಿಯುತ್ತಿದ್ದಾರೆ. ಇವರದ್ದು ತೃಷ್ಟಿ ರಾಜಕಾರಣ. ಸಮಾಜದ‌ ರಕ್ಷಣೆಗೆ ನಾವು ಸಿದ್ದ ಎಂದು ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೂ ಧರ್ಮ, ಸನಾತನ ಧರ್ಮದ ಬಗ್ಗೆ ಮಾತನಾಡುವವರು ಕ್ರಾಸ್ ಬ್ರೀಡ್. ಹಂದಿ ಮಿಶ್ರಿತ ತಳಿಯವರೇ ನಮ್ಮ ಧರ್ಮಕ್ಕೆ ಬಯ್ಯುತ್ತಾರೆ ಎಂದು ಕಿಡಿಕಾರಿದ್ದಾರೆ.

ಶಿವಮೊಗ್ಗ ಗಲಾಟೆ ಹಿಂದೆ ಬಿಜೆಪಿ ಕೈವಾಡವಿದೆ ಎಂದ ಕಾಂಗ್ರೆಸ್​ ನಾಯಕರಿಗೆ ತಿರುಗೇಟು ನೀಡಿದ ಅವರು, ಅಂಥ ಹಲ್ಕಾ ಕೆಲಸ ಮಾಡುವುದು ಕಾಂಗ್ರೆಸ್​. ಯಾವ ಯಾವ ದೇಶದಲ್ಲಿ ಏನು ಏನು ಮಾಡಿದ್ದಾರೆ. ಸ್ವಾತಂತ್ರ್ಯ ಬಂದ ಮೇಲೆ, ಸ್ವಾತಂತ್ರ್ಯ ಪೂರ್ವದಲ್ಲಿ ಏನು ಮಾಡಿದ್ದಾರೆ ಅಂತ ಎಲ್ಲರಿಗೂ ಗೊತ್ತಿದೆ ಎಂದು ಕುಟುಕಿದ್ದಾರೆ.

ಮುಸ್ಲಿಮರು‌ ನನ್ನ ಬ್ರದರ್ಸ್ ಎಂಬ ಪುಣ್ಯಾತ್ಮ..!

ಕರ್ನಾಟಕದಲ್ಲಿ ಹಿಂದೂಗಳ ರಕ್ಷಣೆ ಮಾಡುವುದು ಯಾರು ಎಂಬ ಪ್ರಶ್ನೆ ಮೂಡಿದೆ. ಮುಸ್ಲಿಮರಿಗೆ ಯಾರೂ ಏನೂ ಮಾಡಲ್ಲ ಎಂಬ ವಾತಾವರಣ ಈ ಸರ್ಕಾರದಲ್ಲಿದೆ. ಪೊಲೀಸ್ ಇಲಾಖೆ ಇದೆಲ್ಲಾ ಆಗಲು ಬಿಟ್ಟಿದ್ದು ಯಾಕೆ? ಅಂತ ಗೃಹ ಸಚಿವ ಡಾ.ಜಿ ಪರಮೇಶ್ವರ್ ಉತ್ತರಿಸಬೇಕು. ಮುಸ್ಲಿಮರು‌ ನನ್ನ ಬ್ರದರ್ಸ್ ಎಂಬ ಪುಣ್ಯಾತ್ಮ, ಕುಕ್ಕರ್ ಬ್ಲಾಸ್ಟ್ ಆದಾಗ ಬ್ರದರ್ ಎನ್ನುತ್ತಾರೆ, ನಾಚಿಕೆ ಆಗಲ್ವಾ?ಎಂದು ಗರಂ ಆಗಿದ್ದಾರೆ.

ಮುಸ್ಲಿಂ ರಾಜ್ಯ ಮಾಡಲು ಪ್ರಚೋದನೆ

ಪೊಲೀಸ್ ಠಾಣೆಗೆ ನುಗ್ಗಿ ಗಲಭೆ ಮಾಡಿದ ಕೇಸ್ ವಾಪಸ್ ಪಡೆಯಲು ರಾಜ್ಯದ ಡಿಸಿಎಂ ಪತ್ರ ಬರೆಯುತ್ತಾರೆ. ಈಗಾದ್ರೆ ಪೊಲೀಸರು ಹೇಗೆ ಕೆಲಸ ಮಾಡಬೇಕು? ಕಾಶ್ಮೀರ, ಕೇರಳದ ರೀತಿ ಕರ್ನಾಟಕದಲ್ಲಿ ಮುಸ್ಲಿಂ ರಾಜ್ಯ ಮಾಡಲು ಮುಸ್ಲಿಮರನ್ನು ಪ್ರಚೋದಿಸುವ ಕೆಲಸ ಸಿದ್ದರಾಮಯ್ಯ ಸರ್ಕಾರ ಮಾಡುತ್ತಿದೆ ಎಂದು ಕಾಂಗ್ರೆಸ್​ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

Exit mobile version