Site icon PowerTV

ಇದೇನಾ ಬ್ರಾಂಡ್ ಬೆಂಗಳೂರು? : MS ಬಿಲ್ಡಿಂಗ್ ಈಗ ಡೇಂಜರಪ್ಪೋ.. ಡೇಂಜರ್..!

ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರನ್ನು ಸಿಂಗಾಪುರ್, ಬ್ರಾಂಡ್ ಬೆಂಗ್ಳೂರು ಮಾಡೋದಕ್ಕೆ ರಾಜ್ಯ ಸರ್ಕಾರ ಸಿದ್ಧತೆ ನಡೆಸುತ್ತಿದೆ. ಆದರೆ, ಸರ್ಕಾರಿ ಕೆಲಸ ನಿರ್ವಹಿಸೋ ಕಚೇರಿಗಳೇ ಈಗ ಶೀಥಿಲಾವಸ್ಥೆ ತಲುಪಿದ್ದು ಸರ್ಕಾರಿ ಕಟ್ಟಡಗಳ ಅವ್ಯವಸ್ಥೆ ಬಗ್ಗೆ ಅಧಿಕಾರಿಗಳು ನಿರ್ಲಕ್ಷ ವಹಿಸಿದ್ದಾರೆ.

ಬೆಂಗಳೂರನ್ನು ಸಿಂಗಾಪುರ, ಬ್ರಾಂಡ್ ಮಾಡ್ತೇವೆ ಎಂದು ಡಿ.ಕೆ. ಶಿವಕುಮಾರ್ ಡಿಸಿಎಂ ಆದಾಗಿನಿಂದ ಅದೆಷ್ಟು ಬಾರಿ ಹೇಳಿದ್ದಾರೋ‌ ಲೆಕ್ಕವೇ ಇಲ್ಲ. ಆದ್ರೆ, ಬೆಂಗಳೂರಿನ‌ ಪರಿಸ್ಥಿತಿ ಮಾತ್ರ ಒಂಚೂರು ಬದಲಾಗುತ್ತಿಲ್ಲ. ರಸ್ತೆ ಗುಂಡಿಗಳ ಸಮಸ್ಯೆ ಒಂದೆಡೆ ಆದ್ರೆ, ಸರ್ಕಾರಿ ಕಟ್ಟಡಗಳ ದುಸ್ಥಿತಿ ಇನ್ನೊಂದೆಡೆ. ಇದಕ್ಕೆ ನಿದರ್ಶನ ಎಂಬಂತೆ ಇದೆ MS ಬಿಲ್ಡಿಂಗ್‌‌ನ 4 ಬ್ಲಾಕ್​ನ ಹಿಂಬದಿಯ ಕಟ್ಟಡ.

ಬಹುತೇಕ ಸರ್ಕಾರದ‌ ಎಲ್ಲಾ ಇಲಾಖೆಯ ಕೆಲಸಗಳು MS ಬಿಲ್ಡಿಂಗ್ ನಲ್ಲಿ ಆಗುತ್ತೆ. ಎಲ್ಲಾ ಇಲಾಖೆಯ ಸಾವಿರಾರು ಅಧಿಕಾರಿಗಳು ಇಲ್ಲಿ ಲಭ್ಯವಿರೋಕಾರಣ 10ರಿಂದ 15 ಸಾವಿರ ಜನ ವಿವಿಧ ಕೆಲಸಗಳಿಗಾಗಿ‌ ನಿತ್ಯ ಬರ್ತಾರೆ. ಆದ್ರೆ, ಇಂತಹ ಸರ್ಕಾರದ  ಕಟ್ಟಡ ಶಿತಿಲಾವಸ್ಥೆಗೆ ತಲುಪಿದ್ರು ಸಂಬಂಧಿಸಿದ ಅಧಿಕಾರಿಗಳಾಗಲಿ, ಸರ್ಕಾರವಾಗಲಿ ಕ್ರಮ ವಹಿಸಿಲ್ಲ. ಹಿಗಾಗಿಯೇ ಬೆಳ್ಳಂಬೆಳಗ್ಗೆ MS ಬಿಲ್ಡಿಂಗ್ ನ ಸೀಲಿಂಗ್ ಉದುರಿಬಿದ್ದಿದ್ದು, ಈ ಅನಾಹುತದಲ್ಲಿ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ. ಇನ್ನೂ ಎಂಎಸ್ ಬಿಲ್ಡಿಂಗ್ ಶೀತಿಲವ್ಯಸ್ಥೆ ಬಗ್ಗೆ ಸಾವಿರಜನಿಕರು ಪ್ರತಿಕ್ರಿಯಿಸಿದ್ದು ಸಾವಿರಾರು ಜನ ಬರುವ ಕಟ್ಟಡವನ್ನ ಸರಿಪಡಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಪವರ್ ವರದಿ ಬಳಿಕ ಎಚ್ಚೆತ್ತ ಅಧಿಕಾರಿಗಳು

ವಿಧಾನ ಸೌಧ, ವಿಕಾಸ‌ ಸೌಧಕ್ಕೆ ಅಂಟಿಕೊಂಡಂತೆ ಇರೋ ಎಂಎಸ್‌ ಬಿಲ್ಡಿಂಗ್‌ನ 4ನೇ ಬ್ಲಾಕ್ ನ ಕಟ್ಟಡದ ಸಿಲಿಂಗ್ ಉದರಿಬಿದ್ದ ಘಟನೆ‌ ಸಂಭವಿಸಿ  8ರಿಂದ 10 ಗಂಟೆಗಳಾದರೂ ಅಧಿಕಾರಿಗಳು ಮಾತ್ರ ಏನಾಗಿದೆ ಅನ್ನೋದನ್ನ ನೊಡೋದಕ್ಕೂ  ಸ್ಥಳಕ್ಕೆ ಬರದೇ ಊಡಾಪೆ ತೋರಿದ್ರು.‌ ಪವರ್ ಟಿವಿ ಸುದ್ದಿ ಪ್ರಸಾರ ಮಾಡುತ್ತಿದ್ದಂತೆ ಎಚ್ಚೆತ್ತ ಅಧಿಕಾರಿಗಳು ಸ್ಥಳಕ್ಕೆ ಇಂಜಿನಿಯರ್ ಕಳಿಸಿ ಸ್ಥಳ ಪರಿಶೀಲನೆ ಮಾಡಿದ್ರು.

ಒಟ್ನಲ್ಲಿ ನಿತ್ಯ ಜನಜಂಗುಳಿಯಿಂದ ಕೂಡಿರುವ ಎಂಎಸ್‌ ಬಿಲ್ಡಿಂಗ್‌ನ ಸಿಲಿಂಗ್ ಉದುರಿ ಬಿದ್ದಿರೋದು ಆತಂಕ ಮೂಡಿಸಿದೆ. ಕಟ್ಟಡ ಉದುರಿಬಿದ್ದಿರುವ ಭಾಗವನ್ನ ತ್ವರಿತವಾಗಿ ದುರಸ್ತಿ ಮಾಡುವುದರ ಜೊತೆಗೆ ಕಟ್ಟಡ ಬಹು ಬಾಗದಲ್ಲಿ ಸಿಮೆಂಟ್ ಪ್ಲಾಸ್ಟರ್ ಬಿದ್ದು ಕಬ್ಬಿಣದ ರಾಡ್ ಗಳು‌‌ ಹೊರಬಂದಿರೊದ್ರಿಂದ ಕೂಡಲೇ ಇದನ್ನ ಸರಿಪಡಿಸಬೇಕಿದೆ.

Exit mobile version