Site icon PowerTV

ಹೆಣ ಬೀಳುವುದನ್ನು BJP ಬಕ ಪಕ್ಷಿಯಂತೆ ಕಾಯುತ್ತಿದೆ : ದಿನೇಶ್ ಗುಂಡೂರಾವ್ ವಿವಾದಾತ್ಮಕ ಪೋಸ್ಟ್

ಬೆಂಗಳೂರು : ಶಿವಮೊಗ್ಗದ ಗಲಭೆಯಲ್ಲಿ ಹೆಣ ಬೀಳುವುದನ್ನು BJPಯವರು ಬಕ ಪಕ್ಷಿಯಂತೆ ಕಾಯುತ್ತಿದ್ದರು. ಯಾಕೆಂದರೆ ಹೆಣದ ರಾಜಕೀಯದಲ್ಲಿ BJPಯವರಷ್ಟು ಸಿದ್ಧಹಸ್ತರು ದೇಶದಲ್ಲೇ ಇಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ವಿವಾದಾತ್ಮಕ ಪೋಸ್ಟ್ ಮಾಡಿದ್ದಾರೆ.

ಈ ಕುರಿತು Xನಲ್ಲಿ ಪೋಸ್ಟ್ ಮಾಡಿರುವ ಅವರು, ಯಾವುದೇ ಹೆಣ ಬಿದ್ದರು ಮಳೆಗಾಲದಲ್ಲಿ ದಿಢೀರ್ ಹುಟ್ಟುವ ಜಿಗಣೆಗಳಂತೆ BJPಯವರು ಕ್ರಿಯಾಶೀಲರಾಗುತ್ತಾರೆ‌. ಆದರೆ, ಶಿವಮೊಗ್ಗದಲ್ಲಿ ಹೆಣ ಬೀಳದೆ ಭ್ರಮನಿರಸನಗೊಂಡಿದ್ದಾರೆ ಎಂದು ಕುಟುಕಿದ್ದಾರೆ.

ಶಿವಮೊಗ್ಗದಲ್ಲಿ ಆದಂತಹ ಗಲಭೆ ಹಿಂದೆ BJP ಸರ್ಕಾರವಿದ್ದಾಗಲೂ ನಡೆದಿದ್ದವು. ಆದರೆ, ಆಗಿನ ಸರ್ಕಾರ ಕೇವಲ ಕಠಿಣ ಕ್ರಮದ ಭರವಸೆ ನೀಡುತಿತ್ತು. ಆದರೆ, ಕಾಂಗ್ರೆಸ್​ ಸರ್ಕಾರ ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಂಡಿದೆ. ಸಮಾಜದಲ್ಲಿ ಶಾಂತಿ ತರುವುದು ನಮ್ಮ ಸರ್ಕಾರದ ಜವಾಬಬ್ದಾರಿ. ಇದರಲ್ಲಿ ‌ನಾವು ಯಾರ ಮುಲಾಜು ನೋಡುವುದಿಲ್ಲ ಎಂದು ಹೇಳಿದ್ದಾರೆ.

ಹೆಣ ಬೀಳಲಿಲ್ಲ ಎಂಬ ಬೇಸರಕ್ಕಾಗಿಯೇ?

ಶಿವಮೊಗ್ಗ ಘಟನೆಯಲ್ಲಿ ‌ಭಾಗಿಯಾದ ಕಿಡಿಗೇಡಿಗಳ ವಿರುದ್ಧ ಪೊಲೀಸರು ಕ್ರಮ ತೆಗೆದುಕೊಂಡಿದ್ದಾರೆ. ದುಷ್ಕ್ರತ್ಯ ನಡೆಸಿದ್ದವರ ಮೇಲೆ ಪ್ರಕರಣ ದಾಖಲಾಗಿದೆ. ಆದರೂ, ಬಿಜೆಪಿಯವರು ಈ ಘಟನೆಯನ್ನು ವಿಪರೀತವಾಗಿ ವೈಭವೀಕರಿಸುತ್ತಿದ್ದಾರೆ. ಯಾಕೆ ಈ ವೈಭವೀಕರಣ? ರಾಜಕೀಯ ಲಾಭಕ್ಕಾಗಿಯೇ? ಅಥವಾ ಶಿವಮೊಗ್ಗದ ಘಟನೆಯಲ್ಲಿ ಹೆಣ ಬೀಳಲಿಲ್ಲ ಎಂಬ ಬೇಸರಕ್ಕಾಗಿಯೇ? ಎಂದು ಚಾಟಿ ಬೀಸಿದ್ದಾರೆ.

Exit mobile version