Site icon PowerTV

Mahadev Betting Case : ರಣಬೀರ್ ಕಪೂರ್​ಗೆ ಇಡಿ ಸಮನ್ಸ್ ಜಾರಿ

ಬೆಂಗಳೂರು : ಬಾಲಿವುಡ್​ ಖ್ಯಾತ ನಟ ರಣಬೀರ್​ ಕಪೂರ್​ ಅವರಿಗೆ ಜಾರಿ ನಿರ್ದೇಶನಾಲಯ (ED) ಸಮನ್ಸ್​ ನೀಡಿದೆ.

ದೇಶದೆಲ್ಲೆಡೆ ಭಾರಿ ಸಂಚಲನ ಸೃಷ್ಟಿಸಿರುವ ಮಹದೇವ್ ಬೆಟ್ಟಿಂಗ್ ಆ್ಯಪ್ ಹಗರಣದ ತನಿಖೆ ಮುಂದುವರಿದಿದ್ದು, ಬಾಲಿವುಡ್‌ ಖ್ಯಾತ ನಟ ರಣಬೀರ್ ಕಪೂರ್‌ಗೆ ಇಡಿ ಸಮನ್ಸ್ ಜಾರಿ ಮಾಡಿದೆ. ರಣಬೀರ್‌ ಅವರು ಅಕ್ಟೋಬರ್ 6ರಂದು ಇಡಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

ನಟ ರಣಬೀರ್ ಕಪೂರ್​ ಅವರು ಮಹದೇವ್ ಬೆಟ್ಟಿಂಗ್ ಆ್ಯಪ್  ಪ್ರಚಾರ ಮಾಡಿದ ಆರೋಪ ಕೇಳಿ ಬಂದಿದೆ. ಇದೇ ವೇಳೆ ಇಡಿ ಅಧಿಕಾರಿಗಳ ಸ್ಕ್ಯಾನರ್‌ನಲ್ಲಿ 6ಕ್ಕೂ ಹೆಚ್ಚು ಸೆಲೆಬ್ರಿಟಿಗಳಿದ್ದು ಶೀಘ್ರವೇ ಬಂಧನ ಸಾಧ್ಯತೆ ಇದೆ. ಇಡಿ ಅಧಿಕಾರಿಗಳು ಮತ್ತಷ್ಟು ಬಾಲಿವುಡ್‌ ಪ್ರಮುಖರನ್ನು ವಿಚಾರಣೆ ನಡೆಸುವ ಸಂಭವವಿದೆ.

ಕಳೆದ ತಿಂಗಳು ಮಹದೇವ್ ಆನ್‌ಲೈನ್ ಬೆಟ್ಟಿಂಗ್ ಕೇಸ್‌ ಸಂಬಂಧಪಟ್ಟಂತೆ 417 ಕೋಟಿ ರೂಪಾಯಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಏಜೆನ್ಸಿಯೊಂದು ತನಿಖೆ ಮಾಡಿ ಹೇಳಿತ್ತು.

Exit mobile version