Site icon PowerTV

ತಾಯಿಗೆ ಪುಟ್ಟ ನಾಯಿ ಮರಿ ಗಿಫ್ಟ್ ಕೊಟ್ಟ ರಾಹುಲ್ ಗಾಂಧಿ

ನವದೆಹಲಿ : ವಿಶ್ವ ಪ್ರಾಣಿ ದಿನದ ಸಂದರ್ಭದಲ್ಲಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ತಮ್ಮ ತಾಯಿಗೆ ಪುಟ್ಟ ನಾಯಿ ಮರಿಯನ್ನು ಗಿಫ್ಟ್​ ಆಗಿ ನೀಡಿದ್ದಾರೆ.

ಹೊಸ ಸದಸ್ಯೆ ಹೆಸರು ನೂರಿ, ಮುದ್ದಾಗಿರುವ ನಾಯಿಮರಿ. ಇದು ನಮ್ಮ ಅಮ್ಮ ಸೋನಿಯಾ ಗಾಂಧಿಗೆ ಉಡುಗೊರೆ, ಇದು ಗೋವಾದಿಂದ ವಿಮಾನದಲ್ಲಿ ಇಲ್ಲಿಗೆ ಬಂದಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಈ ಬಗ್ಗೆ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ರಾಹುಲ್ ಗಾಂಧಿ ತಮ್ಮ ಇತ್ತೀಚಿನ ಗೋವಾ ಪ್ರವಾಸವನ್ನು ಹಂಚಿಕೊಂಡಿದ್ದಾರೆ. ಗೋವಾ ಮೂಲದ ನಾಯಿ ಸಾಕಣೆದಾರರಾದ ಶರ್ವಾಣಿ ಪಿತ್ರೆ ಮತ್ತು ಪತಿ ಸ್ಟಾನ್ಲಿ ಬ್ರಗಾಂಕಾ ಅವರನ್ನು ರಾಹುಲ್ ಗಾಂಧಿ ಭೇಟಿಯಾಗಿದ್ದರು. ಜಾಕ್ ರಸ್ಸೆಲ್ ಟೆರಿಯರ್‌ಗಳ ಲಭ್ಯತೆಯ ಬಗ್ಗೆ ವಿಚಾರಿಸಲು ರಾಹುಲ್ ಗಾಂಧಿಯವರ ಕಚೇರಿಯಿಂದ ತಮಗೆ ಕರೆ ಬಂದಿತ್ತು ಎಂದು ಅವರು ಈ ಹಿಂದೆ ಹೇಳಿದದ್ದರು.

Exit mobile version