Site icon PowerTV

INDIA ಹಾವು, ಮುಂಗುಸಿಗಳು ಒಟ್ಟಿಗೆ ಸೇರಿದಂತೆ : ತೇಜಸ್ವಿ ಸೂರ್ಯ

ಬೆಂಗಳೂರು : ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಮಂಗಳವಾರ ವಿರೋಧ ಪಕ್ಷದ ಮೈತ್ರಿಯನ್ನು “ಹಾವು ಮತ್ತು ಮುಂಗುಸಿಗಳು’ ಒಟ್ಟಿಗೆ ಸೇರಿದಂತೆ ಎಂದು ಬಣ್ಣಿಸಿದ್ದಾರೆ.

ನರ್ಮದಾಪುರಂನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈತ್ರಿಕೂಟ ರಚನೆಗೂ ಮುನ್ನಾ ಇವರು ರಹಸ್ಯವಾಗಿ ಹಿಂದೂ ವಿರೋಧಿ ರಾಜಕೀಯ ಮಾಡುತ್ತಿದ್ದರು. ಜಾತ್ಯತೀತತೆಯ ಬುರ್ಖಾ ಹಾಕಿಕೊಂಡು ಹಿಂದೂ ವಿರೋಧಿ ಮತ್ತು ಭಾರತ ವಿರೋಧಿ ರಾಜಕಾರಣ ಮಾಡುತ್ತಿದ್ದರು. ಆದರೆ ಇಂದು ಅವರು ಬಹಿರಂಗವಾಗಿ ಸನಾತನ ಸಂಸ್ಕೃತಿ ಮತ್ತು ಸನಾತನ ಧರ್ಮದ ವಿರುದ್ಧ ಮಾತನಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: ಕಾವೇರಿಗಾಗಿ ಅ.10ಕ್ಕೆ ಎಲ್ಲಾ ರಾಷ್ಟ್ರೀಯ ಹೆದ್ದಾರಿ ಬಂದ್‌: ವಾಟಾಳ್ ನಾಗರಾಜ್​

ಸನಾತನ ಧರ್ಮ ನಿರ್ಮೂಲನೆ ಮಾಡಲು INDIA ಒಕ್ಕೂಟ ರಚಿಸಲಾಗಿದೆ ಎಂದು ಡಿಎಂಕೆ ಹೇಳುತ್ತದೆ. ಮತ್ತೊಂದೆಡೆ ಇನ್ನೊಂದು ಮೈತ್ರಿಕೂಟ ಸಮುದಾಯವನ್ನು ಜಾತಿಯ ಆಧಾರದ ಮೇಲೆ ಒಡೆಯಲು ಪ್ರಯತ್ನಿಸುತ್ತದೆ ಎಂದರು.

Exit mobile version