Site icon PowerTV

ಏರ್​ ಪೋರ್ಟ್​ ರಸ್ತೆ ಕಾಮಗಾರಿ ವಿಳಂಬ: ಸಾರ್ವಜನಿಕರ ಆಕ್ರೋಶ

ಬೆಂಗಳೂರು ಗ್ರಾಮಾಂತರ : ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯು ತೀರಾ ಹಾಳಾಗಿದ್ದು  ರಸ್ತೆಯ ಸ್ಥಿತಿ ಹೇಳೋರಿಲ್ಲ, ಕೇಳೋರಿಲ್ಲ ಎನ್ನುವಂತ ಸ್ಥತಿ ನಿರ್ಮಾಣವಾಗಿದೆ.

ಬೂದಿಗೆರೆ ಕ್ರಾಸ್‌ನಿಂದ ಏರ್‌ಪೋರ್ಟ್‌ವರೆಗೆ ರಸ್ತೆ ಕಾಮಗಾರಿ ಆರಂಭಿಸಲಾಗಿತ್ತು. ಆದರೆ, ಟೆಂಡರ್ ಅವಧಿ ಮುಗಿದಿದ್ದರೂ ಕಾಮಗಾರಿ ಮಾತ್ರ ಮುಗಿದಿಲ್ಲ. ರಸ್ತೆ ಸ್ವಾಧೀನ ಮಾಡಿ ಇನ್ನೂ ಸೂಕ್ತ ಪರಿಹಾರವನ್ನೂ ಕೊಟ್ಟಿಲ್ಲ. ರೈತರು ದಿನನಿತ್ಯ ಕೋರ್ಟ್‌ ಕಚೇರಿ ಅಲೆಯುವ ಪರಿಸ್ಥಿತಿ ನಿರ್ಮಾಣವಾಗಿದೆ.

ಇದನ್ನೂ ಓದಿ: ಬಿಜೆಪಿ ಜೊತೆ ಜೆಡಿಎಸ್​ ಮೈತ್ರಿಗೆ ಸಿಎಂ ಇಬ್ರಾಹಿಂ ಅಸಮಧಾನ!

ಕಾಮಗಾರಿ ವಿಳಂಬವಾಗಿರುವುದರಿಂದ ಅಪಘಾತಗಳ ಸಂಖ್ಯೆ ಹೆಚ್ಚಳವಾಗುತ್ತಿದ್ದು ಇಲ್ಲಿನ ಸ್ಥಳೀಯರು ಜೀವದ ಸಂಕಷ್ಟದಲ್ಲಿದೆ, ಸಂಬಂಧಪಟ್ಟ ಅಧಿಕಾರಿಗಳ ವಿರುದ್ದ ಮತ್ತು KRDCL ಕಾಮಗಾರಿಗೆ ರೈತರು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Exit mobile version