Site icon PowerTV

ಮೀಸಲಾತಿ ರೂಪಿಸಲು ಜಾತಿ ಗಣತಿ ಅನುಕೂಲ: ಗೃಹಸಚಿವ ಪರಮೇಶ್ವರ್​

ಬೆಂಗಳೂರು : ಮೀಸಲಾತಿ ರೂಪಿಸುವ ಸಂದರ್ಭದಲ್ಲಿ ಈ ಜಾತಿ ಗಣತಿಯಿಂದ ಅನುಕೂಲ ಆಗಲಿದೆ, ಜಾತಿಗಣತಿ ಜಾರಿ ಮಾಡುವ ವಿಚಾರ ಕುರಿತು ಗೃಹ ಸಚಿವ ಡಾ.ಜಿ.ಪರಮೇಶ್ವರ್​​ ಸ್ಪಷ್ಟನೆ ನೀಡಿದ್ದಾರೆ.

ಬೆಂಗಳೂರಲ್ಲಿ ಮಾತನಾಡಿದ ಅವರು, ಸರ್ಕಾರ ಜಾತಿ ಗಣತಿಯ ಜವಾಬ್ದಾರಿಯನ್ನು ಸಮಿತಿಗೆ ಕೊಟ್ಟಿತ್ತು. ಶೀಘ್ರದಲ್ಲೇ ಸರ್ಕಾರಕ್ಕೆ ವರದಿ ಸಲ್ಲಿಸುತ್ತೇನೆ ಎಂದು ಜಯಪ್ರಕಾಶ್ ಹೆಗ್ಡೆ ಹೇಳಿದ್ದಾರೆ. ವರದಿ ಬಂದ ಮೇಲೆ ಚರ್ಚೆ ಮಾಡೋಣ. ಯಾವ್ಯಾವ ಸಮುದಾಯದ ಎಷ್ಟಿದೆ ಎಂದು ಗೊತ್ತಾಗುತ್ತದೆ ಎಂದು ಹೇಳಿದ್ದಾರೆ.

ಇದನ್ನು ಓದಿ: ಏರ್​ ಪೋರ್ಟ್​ ರಸ್ತೆ ಕಾಮಗಾರಿ ವಿಳಂಬ: ಸಾರ್ವಜನಿಕರ ಆಕ್ರೋಶ

ನೂರಾರು ಕೋಟಿ ಖರ್ಚು ಮಾಡಿ ವರದಿ ಸಿದ್ಧಪಡಿಸಲಾಗಿದೆ. ಇಷ್ಟೆಲ್ಲ ಖರ್ಚು ಮಾಡಿ ಸರ್ಕಾರಕ್ಕೆ ವರದಿ ಕೊಡದೆ ಹೋದರೆ ಹಣ ವ್ಯರ್ಥ ಅಲ್ಲವೆ? ಶಾಶ್ವತ ಮಾಹಿತಿ ಇದ್ದರೆ ಅನುಕೂಲ ಆಗಬಹುದು ಎಂಬ ಉದ್ದೇಶದಿಂದ ಸಮಿತಿ ಮಾಡಲಾಗಿದೆ. ಸರ್ಕಾರದ ಹಣ ಪೋಲಾಗಲಿ ಎಂದು ಸಮಿತಿ ರಚಿಸಿಲ್ಲ. ಮುಂದಿನ ದಿನದಲ್ಲಿ ಮೀಸಲಾತಿ ಮಾಡುವ ಸಂದರ್ಭದಲ್ಲಿ ಈ ಜಾತಿ ಗಣತಿ ಅನುಕೂಲ ಆಗಲಿದೆ ಎಂದು ತಿಳಿಸಿದರು.

Exit mobile version