Site icon PowerTV

ದೇಶದ ಜನತೆಗೆ ಬಿಗ್‌ ಗಿಫ್ಟ್‌ : 300 ರೂಪಾಯಿ LPG ಸಬ್ಸಿಡಿ ಘೋಷಣೆ

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಸರ್ಕಾರ ದೇಶದ ಜನತೆಗೆ ಬಿಗ್‌ ಗಿಫ್ಟ್ ನೀಡಿದೆ. ಉಜ್ವಲ ಯೋಜನೆಯಡಿ ಸಬ್ಸಿಡಿ ದರ ಹೆಚ್ಚಳ ಮಾಡಿ ಘೋಷಿಸಿದೆ. ಇನ್ಮುಂದೆ 600 ರೂಪಾಯಿಗೆ ಸಿಲಿಂಡರ್‌ ಸಿಗುತ್ತದೆ.

ಉಜ್ವಲ ಯೋಜನೆಯಡಿ ಗ್ಯಾಸ್ ಪಡೆಯುವ ಫಲಾನುಭವಿಗಳಿಗೆ ಭರ್ಜರಿ ಗಿಫ್ಟ್ ನೀಡಿದ್ದು, ಇದೀಗ 300 ರೂಪಾಯಿ ಸಬ್ಸಿಡಿ ಸಿಗಲಿದೆ. ಕೇಂದ್ರ ಸಚಿವ ಸಂಪುಟ ಮಹತ್ವದ ನಿರ್ಧಾರ ಕೈಗೊಂಡಿದೆ.

ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ ಗ್ಯಾಸ್​ ಸಿಲಿಂಡರ್ ಸಂಪರ್ಕ ಪಡೆದವರಿಗೆ ಮತ್ತೆ 100 ರೂಪಾಯಿ ಸಬ್ಸಿಡಿ ನೀಡಲಾಗಿದೆ. ಗ್ಯಾಸ್‌ ಸಿಲಿಂಡರ್‌ ಬೆಲೆಯಲ್ಲಿ 200 ರೂಪಾಯಿ ಇಳಿಕೆ ಮಾಡಿತ್ತು. 200 ರೂಪಾಯಿ ಸಬ್ಸಿಡಿಯನ್ನು ಕೇಂದ್ರ ಸರ್ಕಾರ ಘೋಷಣೆ ಮಾಡಿತ್ತು. ಇದರೊಂದಿಗೆ ಒಟ್ಟು ಸಹಾಯಧನ 300 ರೂಪಾಯಿ ತಲುಪಿದೆ.

ಉಜ್ವಲಾ ಫಲಾನುಭವಿಗಳು ಪ್ರಸ್ತುತ 14.2 ಕೆಜಿ ಸಿಲಿಂಡರ್‌ಗೆ 703 ರೂ.ಗಳನ್ನು ಪಾವತಿಸುತ್ತಿದ್ದಾರೆ. ಮಾರುಕಟ್ಟೆ ಬೆಲೆ 903 ರೂಪಾಯಿ ಇದೆ. ಕೇಂದ್ರ ಸಚಿವ ಸಂಪುಟದ ನಿರ್ಧಾರದ ನಂತರ ಈಗ 603 ರೂಪಾಯಿ ಪಾವತಿಸಿದರೆ ಸಿಲಿಂಡರ್​ ಸಿಗಲಿದೆ.

Exit mobile version