Site icon PowerTV

ವಿಶ್ವಕಪ್​ 2023: ಇಂದು ಭಾರತಕ್ಕೆ ಕೊನೆಯ ಅಭ್ಯಾಸ ಪಂದ್ಯ!

ಬೆಂಗಳೂರು : ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ಅಕ್ಟೋಬರ್ 5 ರಂದು ಚಾಲನೆ ಸಿಗಲಿದೆ. ಇದಕ್ಕೂ ಮುನ್ನ ಎಲ್ಲ ತಂಡಗಳು ಅಭ್ಯಾಸ ಪಂದ್ಯ ಆಡುತ್ತಿದೆ.

ಭಾರತ ತನ್ನ ಎರಡನೇ ಹಾಗೂ ಕೊನೆಯ ವಾರ್ಮ್-ಅಪ್ ಮ್ಯಾಚ್ ಅನ್ನು ಇಂದು ನೆದರ್ಲೆಂಡ್ಸ್ ವಿರುದ್ಧ ತಿರುವನಂತಪುರಂನ ಗ್ರೀನ್ ಫೀಲ್ಡ್ ಕ್ರೀಡಾಂಗಣದಲ್ಲಿ ಆಡಲಿದೆ. ಈಗಾಗಲೇ ಟೀಮ್ ಇಂಡಿಯಾ ತಿರುವನಂತಪುರಂಗೆ ತಲುಪಿದ್ದು ವಿಶೇಷ ರೀತಿಯಲ್ಲಿ ಆಟಗಾರರು ಅಭ್ಯಾಸ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಪ್ರಯಾಣಿಕರ ಗಮನಕ್ಕೆ: ಮೆಟ್ರೋ ಹಸಿರು ಮಾರ್ಗದ ಸಂಚಾರದಲ್ಲಿ ವ್ಯತ್ಯಯ!

ರೋಹಿತ್ ಶರ್ಮಾ, ಕೋಚ್ ದ್ರಾವಿಡ್, ಹಾರ್ದಿಕ್ ಪಾಂಡ್ಯ ಸೇರಿದಂತೆ ವಿಶ್ವಕಪ್​ ತಂಡದಲ್ಲಿರುವ ಎಲ್ಲ ಆಟಗಾರರು ಭಾನುವಾರ ತಿರುವನಂತಪುರಕ್ಕೆ ತಲುಪಿದ್ದರು. ಸೋಮವಾರ ಆಟಗಾರರು ಮೈದಾನದಲ್ಲಿ ಬೆವರು ಹರಿಸಿದರು. ಅಭ್ಯಾಸಕ್ಕೆ ಕೊಂಚ ಮಳೆ ಕೂಡ ಅಡ್ಡಿಪಡಿಸಿತು.

ಆದರೆ, ಭಾರತ ತಂಡದ ಬ್ಯಾಟಿಂಗ್ ಸೂಪರ್‌ಸ್ಟಾರ್ ವಿರಾಟ್ ಕೊಹ್ಲಿ ಭಾಗವಾಗಿರಲಿಲ್ಲ. ಕೌಟುಂಬಿಕ ತುರ್ತುಪರಿಸ್ಥಿತಿಯಿಂದಾಗಿ ಕೊಹ್ಲಿ ಮುಂಬೈನಲ್ಲಿದ್ದು, ಇಂದಿನ ಅಭ್ಯಾಸ ಪಂದ್ಯ ಆಡುತ್ತಾರ ಎಂಬುದು ಖಚಿತವಾಗಿಲ್ಲ.

Exit mobile version