Site icon PowerTV

ಸಾವಿನಲ್ಲೂ ಒಂದಾದ ದಂಪತಿ : ಪತಿ ಜೊತೆಯಲ್ಲೇ ಪತ್ನಿಯ ಸಾವು

ಕೊಪ್ಪಳ : ಪತಿ ಹಾಗೂ ಪತ್ನಿ ಇಬ್ಬರೂ ಸಾವಿನಲ್ಲೂ ಒಂದಾಗಿರುವ ಮನಕಲುಕುವ ಘಟನೆ ಕೊಪ್ಪಳ ಜಿಲ್ಲೆಯ ಕುಷ್ಟಗಿ ಪಟ್ಟಣದಲ್ಲಿ ನಡೆದಿದೆ.

ಹನುಮಂತಪ್ಪ ಮೇಟಿ (81) ಹಾಗೂ ಗೌರಮ್ಮ ಮೇಟಿ (65) ಸಾವಿನಲ್ಲೂ ಒಂದಾದ ದಂಪತಿಗಳು. ತಡರಾತ್ರಿ ಹೃದಯಾಘಾತದಿಂದ ಪತಿ ಹನುಮಂತಪ್ಪ ಮೇಟಿ ನಿಧನರಾಗಿದ್ದಾರೆ. ಪತಿಯ ಸಾವಿನಿಂದ ಆಘಾತಗೊಂಡಿದ್ದ ಪತ್ನಿ ಗೌರಮ್ಮ ಬಳಿಕ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಮೃತ ದಂಪತಿ ಮೂಲತಃ ಯಲಬುರ್ಗಾ ತಾಲೂಕಿನ ಹಿರೇಅರಳಹಳ್ಳಿ ಗ್ರಾಮಸ್ಥರು ಎನ್ನಲಾಗಿದೆ. ಕೆಲವೇ ತಾಸುಗಳಲ್ಲಿ ಸಾವನ್ನಪ್ಪಿದ ದಂಪತಿಗಳ ಕಂಡು ಕುಟುಂಬದಲ್ಲಿ ಶೋಕ ಮಡುಗಟ್ಟಿದೆ. ಸ್ಥಳೀಯರು ಸಾವಿನಲ್ಲೂ ಒಂದಾದ ದಂಪತಿಗಳ ಅಂತಿಮ ದರ್ಶನ ಪಡೆದಿದ್ದಾರೆ.

Exit mobile version