Site icon PowerTV

Wow.. ನೀರು ಕುಡಿದ ನಂತರ ನಲ್ಲಿ ಆಫ್ ಮಾಡುವ ಶ್ವಾನ

ಬೆಂಗಳೂರು : ಮನುಷ್ಯರಾದ ನಾವು ತೋರ್ಪಡಿಕೆಗಾಗಿ ನೀರನ್ನು ಉಳಿಸಿ ಅಂತ ವೇದಂತ ಹೇಳುತ್ತೇವೆ. ನಮಗೆ ಅರಿವಿಲ್ಲದೆಯೇ ನೀರನ್ನು ವ್ಯರ್ಥ ಮಾಡುತ್ತೇವೆ. ಆದರೆ, ಇಲ್ಲೊಂದು ಶ್ವಾನ ಮಾಡಿರುವ ಕಾರ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಗುತ್ತಿದೆ.

ಹೌದು, ರೆಡ್ಡಿಟ್​ನಲ್ಲಿ ಈ ಶ್ವಾನದ ವಿಡಿಯೋ ಪೋಸ್ಟ್ ಮಾಡಲಾಗಿದೆ. ಈ ದೃಶ್ಯದಲ್ಲಿ ಶ್ವಾನವೊಂದು( ನಾಯಿ) ಓಡಿಬಂದು ನಲ್ಲಿಯನ್ನು ಆನ್ ಮಾಡುತ್ತದೆ. ನೀರನ್ನು ಕುಡಿದ ನಂತರ ತನ್ನ ಮೂತಿಯಿಂದ ನಲ್ಲಿಯನ್ನು ಆಫ್(ಬಂದ್)​ ಮಾಡುತ್ತದೆ. ನೆಟ್ಟಿಗರು ಈ ವಿಡಿಯೋ ನೋಡಿ ಫಿದಾ ಆಗಿದ್ದಾರೆ.

ಈ ಶ್ವಾನ ಮನುಷ್ಯರಿಗಿಂತ ಜವಾಬ್ದಾರಿಯುತವಾಗಿ ವರ್ತಿಸುತ್ತಿದೆ. ಇದು ತುಂಬಾ ಬುದ್ಧಿವಂತ ಶ್ವಾನ ಅಂತ ಶ್ಲಾಘಿಸುತ್ತಿದ್ದಾರೆ. ಮೂಲತಃ ಈ ವಿಡಿಯೋ ಅನ್ನು ಟಿಕ್​ಟಾಕ್​ನಲ್ಲಿ ಪೋಸ್ಟ್ ಮಾಡಲಾಗಿತ್ತು. ರೆಡ್ಡಿಟ್​ನಲ್ಲಿ ಈವರೆಗೆ 3,000ಕ್ಕೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ. ನೂರಾರು ಜನರು ತಮಗೆ ಅನ್ನಿಸಿದ್ದನ್ನು ಕಮೆಂಟ್ ಮೂಲಕ ತಿಳಿಸಿದ್ದಾರೆ.

ತುಂಬಾ ಒಳ್ಳೆಯ ಹುಡುಗನಿವ

ತುಂಬಾ ಒಳ್ಳೆಯ ಹುಡುಗನಿವ, ನೀರು ಕುಡಿದ ಮೇಲೆ ನಲ್ಲಿಯನ್ನು ತಿರುಗಿಸುವುದೂ ಇವನಿಗೆ ಗೊತ್ತಿದೆ ಅಂತ ಒಬ್ಬರು ಹೇಳಿದ್ದಾರೆ. ಜಲಸಂರಕ್ಷಣೆಯಲ್ಲಿ ಮನುಷ್ಯರಿಗಿಂತ ಹೆಚ್ಚು ತಿಳಿವಳಿಕೆ ನಾಯಿಗಿದೆ ಅಂತ ಮತ್ತೊಬ್ಬರು ತಿಳಿಸಿದ್ದಾರೆ. ನಿಜಕ್ಕೂ ಈ ವಿಡಿಯೋದಿಂದ ನಾನು ಪ್ರಭಾವಿತಗೊಂಡಿದ್ದೇನೆ ಅಂತ ಇನ್ನೊಬ್ಬರು ತನ್ನ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ.

He opened the tap like, he pays the rent!
by inDOG

Exit mobile version