Site icon PowerTV

ಚಲಿಸುತ್ತಿದ್ದ ಕ್ರೇನ್​ಗೆ ಬೆಂಕಿ!: ಭಯಭೀತರಾದ ಜನ

ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನ ಯಲಚೇನಹಳ್ಳಿ ಮೆಟ್ರೋ ಸ್ಟೇಷನ್ ಸಮೀಪ ತಡರಾತ್ರಿ ಚಲಿಸುತ್ತಿದ್ದ ಬೃಹತ್ ಕ್ರೇನ್ ನಡುರಸ್ತೆಯಲ್ಲೇ ಹೊತ್ತಿ ಉರಿದ ಘಟನೆ ನಡೆದಿದೆ.

ದಗ ದಗ ಉರಿಯುವ ಕ್ರೇನ್ ಕಂಡು ಜನ ಭಯಭೀತರಾಗಿದ್ದು ಕೂಡಲೆ ಎರಡು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಬಂದು ಹರಸಾಹಸ ಪಟ್ಟು ಬೆಂಕಿ ನಂದಿಸುವ ಕಾರ್ಯ ಮಾಡಿವೆ.

ಇದನ್ನೂ ಓದಿ : ಲೋಕಸಭಾ ಚುನಾವಣೆ: ಬಿಹಾರದ ಜಾತಿ ಆಧಾರಿತ ಜನಗಣತಿ ವರದಿ ಬಿಡುಗಡೆ!

ವರ್ತೂರಿನಿಂದ ಬಿಡದಿಗೆ ಹೋಗುತ್ತಿದ್ದ ವೇಳೆ ಘಟನೆ ನಡೆದಿದ್ದು ಕ್ರೇನ್​ನಲ್ಲಿ ಬೆಂಕಿ ಕಾಣಿಸುತ್ತಿದ್ದಂತೆ ಚಾಲಕ ಹಾಗೂ ಸಿಬ್ಬಂದಿ ಕೆಳಗೆ ಜಿಗಿದು ಪ್ರಾಣ ಕಾಪಾಡಿಕೊಂಡಿದ್ದಾರೆ. ಕ್ರೇನ್ ಚಾಲಕ, ಇಬ್ಬರು ಸಿಬ್ಬಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Exit mobile version