Site icon PowerTV

ಶಿವಮೊಗ್ಗ ಈದ್ ಗಲಾಟೆಗೆ ಸಿದ್ದರಾಮಯ್ಯ ಕಾರಣ : ಶೋಭಾ ಕರಂದ್ಲಾಜೆ

ಚಾಮರಾಜನಗರ : ಶಿವಮೊಗ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ನಡೆದಿರುವ ಗಲಾಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಕಾರಣ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ.

ಚಾಮರಾಜನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಗಲಭೆಗೆ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರ ಕುಮ್ಮುಕ್ಕು ಇದೆ. ಹಿಂದೂಗಳ ಅಪಮಾನ ಮಾಡುವ ರೀತಿಯಲ್ಲಿ ರಾಜ್ಯದಲ್ಲಿ ಈದ್ ಮಿಲಾದ್ ನಡೆಯುತ್ತಿದೆ ಎಂದು ದೂರಿದ್ದಾರೆ.

ಶಿವಮೊಗ್ಗದ ಎಲ್ಲ ಮುಸಲ್ಮಾನರ ಕೈಯಲ್ಲಿ ಕಲ್ಲು, ತಲ್ವಾರುಗಳಿದ್ದವು. ಅದನ್ನೆಲ್ಲ ಯಾಕೆ ಪೊಲೀಸರು ಗಮನಿಸಲಿಲ್ಲ. ಪೊಲೀಸರ ಕೈ ಕಟ್ಟಿಹಾಕಿದ್ದಾರೆ. ನಿಮಗೆ ಕೇವಲ ಮುಸಲ್ಮಾನ ಸಮಾಜದಿಂದ ಸರ್ಕಾರ ಅಧಿಕಾರಕ್ಕೆ ಬಂದು 135 ಸೀಟ್ ಬಂದಿದಿಯಾ? ಎಂದು ಸಿದ್ದರಾಮಯ್ಯರಿಗೆ ಶೋಭಾ ಕರಂದ್ಲಾಜೆ ಪ್ರಶ್ನಿಸಿದ್ದಾರೆ.

ಸಿದ್ದರಾಮಯ್ಯರನ್ನು ಸುಮ್ಮನೆ ಬಿಡಲ್ಲ

ಯಾಕೆ ಮುಸ್ಲಿಂ ಸಮಾಜ ಓಲೈಸುವ ಕೆಲಸ ಮಾಡುತ್ತಿದ್ದೀರಿ? ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದ್ದೀರಿ. ಗಲಾಟೆ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಲ್ಲವೆಂದರೆ ಸಿದ್ದರಾಮಯ್ಯ ಅವರನ್ನು ಸುಮ್ಮನೆ ಬಿಡಲ್ಲ ಎಂದು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

Exit mobile version