Site icon PowerTV

ಗಂಗಾವತಿಯಲ್ಲಿ ಹರಿದ ನೆತ್ತರು : ತಮ್ಮನ ಕತ್ತು ಕೊಯ್ದು ಹತ್ಯೆಗೈದ ಪಾಪಿ ಅಣ್ಣ

ಕೊಪ್ಪಳ : ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ರಾತ್ರಿ ಸ್ವಂತ ಅಣ್ಣನೇ ತಮ್ಮನನ್ನು ಕತ್ತು ಕೊಯ್ದು ಕೊಲೆ ಮಾಡಿರುವ ಭಯಾನಕ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿಯ ಹೆಚ್​.ಆರ್​.ಎಸ್​ (HRS) ಕಾಲೋನಿಯಲ್ಲಿ ನಡೆದಿದೆ.

ಮೌಲಾ ಹುಸೇನ್ ಮೃತ ದುರ್ದೈವಿ. ನೂರ್ ಅಹಮದ್ ತಮ್ಮನನ್ನೇ ಕೊಲೆಗೈದ ಆರೋಪಿ. ಮೌಲಾ ಹುಸೇನ್​ನನ್ನು ಕೊಲೆ ಮಾಡಿ ಪೊಲೀಸರಿಗೆ ಶರಣಾಗಿದ್ದಾನೆ. ಈ ಘಟನೆಯಿಂದ ಗಂಗಾವತಿ ಜನರು ಬೆಚ್ಚಿ ಬಿದ್ದಿದ್ದಾರೆ.

ನೂರ್ ಅಹಮ್ಮದ್ ಸರಿ ಇಲ್ಲ ಎಂದು ಮೌಲಾ ಹುಸೇನ್ ಹೇಳಿದ್ದನು. ಇದನ್ನು ನಂಬಿ ನೂರ್ ಅಹಮ್ಮದ್ ಪತ್ನಿ ತನಗೆ ಡೈವರ್ಸ್ ನೀಡು ಎಂದು ಹೇಳಿದ್ದಳು. ಇದರಿಂದ ಗಂಡ ಹಾಗೂ ಹೆಂಡತಿ ನಡುವೆ ಜಗಳ ಶುರುವಾಗಿತ್ತು. ಪತಿ ಹಾಗೂ ಪತ್ನಿಯರ ಜಗಳ ಸಹೋದರ ಮೌಲಾ ಹುಸೇನ್ ಕೊಲೆಯಲ್ಲಿ ಅಂತ್ಯವಾಗಿದೆ.

ಈ ಸುದ್ದಿ ಓದಿದ್ದೀರಾ? : ಸಾವಿನಲ್ಲೂ ಒಂದಾದ ದಂಪತಿ : ಪತಿ ಜೊತೆಯಲ್ಲೇ ಪತ್ನಿಯ ಸಾವು

ತಮ್ಮನ ಹತ್ಯಗೆ ಕಾರಣವೇನು?

ನೂರ್ ಅಹಮದ್ ಕೋಪದ ಕೈಗೆ ಬುದ್ದಿ ಕೊಟ್ಟು ತನ್ನ ತಮ್ಮ ಮೌಲಾ ಹುಸೇನ್​ನನ್ನು ಕೊಲೆ ಮಾಡಿದ್ದಾನೆ. ಘಟನಾ ಸ್ಥಳಕ್ಕೆ ಗಂಗಾವತಿ ನಗರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಮ್ಮನ ಕೊಲೆಗೆ ನಿಖರ ಕಾರಣ ತನಿಖೆ ಬಳಿಕವೇ ಬಹಿರಂಗವಾಗಲಿದೆ.

Exit mobile version