Site icon PowerTV

ನಟ ಅಭಿಷೇಕ್ ಅಂಬರೀಶ್​​ಗೆ ಬರ್ತ್​​​ಡೇ ಸಂಭ್ರಮ!

ಬೆಂಗಳೂರು : ಅಭಿಷೇಕ್ ಅಂಬರೀಷ್ ಅವರಿಗೆ ಇಂದು ಜನ್ಮದಿನದ ಸಂಭ್ರಮ. ಸೋಶಿಯಲ್ ಮೀಡಿಯಾದಲ್ಲಿ ಅವರಿಗೆ ಎಲ್ಲರೂ ಶುಭಾಶಯಗಳು ಹರಿದುಬರುತ್ತಿದೆ.

ತಮ್ಮ ನಿವಾಸದಲ್ಲಿ ಕಳೆದ ರಾತ್ರಿ ಅಭಿಮಾನಿಗಳು ತಮ್ಮ ನೆಚ್ಚನ ನಟನ ಜನ್ಮದಿನಕ್ಕೆ ಶುಭಾಷಯಗಳನ್ನು ಕೋರಲು ಅವರ ಮನೆಯ ಸಮೀಪ ನೆರೆದಿದ್ದರು. ನಟ ಅಭಿಷೇಕ್ ಇಂದು ಬೆಳಗ್ಗೆ ಕೂಡ ಅಭಿಮಾನಿಗಳನ್ನು ಭೇಟಿ ಮಾಡಲಿದ್ದಾರೆ.

ಇದನ್ನೂ ಓದಿ: ಪ್ರಯಾಣಿಕರ ಗಮನಕ್ಕೆ: ಮೆಟ್ರೋ ಹಸಿರು ಮಾರ್ಗದ ಸಂಚಾರದಲ್ಲಿ ವ್ಯತ್ಯಯ!

ಈ ವರ್ಷ ಬರಗಾಲದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಕಾರಣದಿಂದಲೇ ಅವರು ಅದ್ದೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳದಿರಲು ನಿರ್ಧರಿಸಿದ್ದಾರೆ. ಈ ಕುರಿತು ಪೋಸ್ಟ್ ಕೂಡ ಹಾಕಿದ್ದರು. ಅಲ್ಲದೆ, ಮನೆ ಬಾಗಿಲಿಗೆ ಅಭಿಮಾನಿಗಳು ಬಂದರೆ ಅವರನ್ನು ಹಾಗೆಯೇ ಕಳುಹಿಸುವುದಿಲ್ಲ ಎಂದು ಕೂಡ ಅವರು ಹೇಳಿದ್ದರು. ಈಗ ಹಾಗೆಯೇ ಮಾಡಿದ್ದಾರೆ.

ಎಲ್ಲರ ಜೊತೆ ಫೋಟೋಗೆ ಪೋಸ್ ಕೊಟ್ಟ ಬಳಿಕವೇ ಅಭಿಮಾನಿಗಳನ್ನು ಬೀಳ್ಕೊಟ್ಟಿದ್ದಾರೆ. ಅಭಿಷೇಕ್ ಅವರಿಗೆ ಸೋಶಿಯಲ್ ಮೀಡಿಯಾ ಮೂಲಕವೂ ವಿಶ್ ತಿಳಿಸಲಾಗುತ್ತಿದೆ. ಫ್ಯಾನ್ ಪೇಜ್​ಗಳಲ್ಲಿ ಅವರ ಫೋಟೊ ಹಾಕಿ ಸಂಭ್ರಮಿಸಲಾಗುತ್ತಿದೆ.

Exit mobile version