Site icon PowerTV

ನಟ ನಾಗಭೂಷಣ್ ಮೇಲೆ ಮತ್ತೊಂದು FIR

ಬೆಂಗಳೂರು : ನಟ ನಾಗಭೂಷಣ್ ಗೆ ಮತ್ತೊಂದು ಸಂಕಷ್ಟ ಎದುರಾಗಿದ್ದು ಬೆಸ್ಕಾಂ ಎಂಜಿನಿಯರ್​ ನಟನ ಮೇಲೆ ದೂರು ದಾಖಲಿಸಿದ್ದಾರೆ.

ಅಪಘಾತದ ವೇಳೆ ವಿದ್ಯುತ್ ಕಂಬಕ್ಕೆ ಹಾನಿ ಉಂಟು ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಬೆಸ್ಕಾಂ ಎಂಜಿನಿಯರ್ ಕೊಟ್ಟ ದೂರಿನ ಮೇಲೆ IPC 427 ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಸಾರ್ವಜನಿಕರ ಆಸ್ತಿಗೆ ನಷ್ಟ ಉಂಟು ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಕುಮಾರಸ್ವಾಮಿ ಲೇಔಟ್ ಸಂಚಾರ ಪೊಲೀಸರಿಂದ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಆನೆಗಳ ಕಾಡಿಗಟ್ಟಲು ಡ್ರೋನ್ ತಂತ್ರಜ್ಞಾನ ಬಳಕೆ!

ಈ ಹಿನ್ನೆಲೆ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ನಟ ನಾಗಭೂಷಣ್ ಗೆ ಕರೆ ಮಾಡಿ ತಿಳಿಸಲು ಯತ್ನಿಸಿದ್ದಾರೆ. ಆದರೆ ನಟ ನಾಗಭೂಷಣ್ ಪೋನ್ ಪಿಕ್ ಮಾಡಿಲ್ಲ ಎನ್ನಲಾಗಿದೆ.

Exit mobile version