Site icon PowerTV

ಗಣೇಶೋತ್ಸವ ಶಾಂತಿಯುತವಾಗಿ ನಡೆದಿದೆ, ಈದ್ ಮಿಲಾದ್ ವೇಳೆ ಈ ರೀತಿ ನಡೆದಿರುವುದು ದುರಂತ : ಬಿ.ವೈ. ರಾಘವೇಂದ್ರ

ಶಿವಮೊಗ್ಗ : ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ ಶಾಂತಿಯುತವಾಗಿ ನಡೆದಿದೆ. ಆದರೂ, ಈದ್ ಮಿಲಾದ್ ಮೆರವಣಿಗೆ ವೇಳೆ ಈ ರೀತಿ ನಡೆದಿರುವುದು ದುರಂತ ಎಂದು ಸಂಸದ ಬಿ.ವೈ. ರಾಘವೇಂದ್ರ ಬೇಸರಿಸಿದ್ದಾರೆ.

ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆ ಶಿವಮೊಗ್ಗದ ರಾಗಿಗುಡ್ಡದಲ್ಲಿ ಕಲ್ಲು ತೂರಾಟ ನಡೆದು ಅನೇಕ ಹಿಂದೂಗಳ ಮನೆಗಳ ಮೇಲೆ ಕಲ್ಲು ತೂರಾಟ ನಡೆದಿದೆ. ಕೆಲವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ ಎಂದು ಹೇಳಿದ್ದಾರೆ.

ಈ ರೀತಿಯ ದುಷ್ಕೃತ್ಯ ಮಾಡಿರುವುದು ಯಾರೇ ಆಗಿರಲಿ, ಧರ್ಮದವರಾಗಿರಲಿ ಅವರನ್ನು ಎಚ್ಚರಿಸುವ ಕೆಲಸ ರಾಜ್ಯ ಸರ್ಕಾರ ಮಾಡಬೇಕು. ಈ ಕೃತ್ಯ ಯಾರು ಮಾಡಿದ್ರು? ಯಾಕೆ ಮಾಡಿದ್ರು? ಅವರ ಮೇಲೆ ಪೊಲೀಸರು ಕಠಿಣ ಕ್ರಮ ತೆಗೆದುಕೊಳ್ಳಬೇಕು. ಶಿವಮೊಗ್ಗ ಶಾಂತಿಯುತವಾಗಿರಬೇಕು ಎಂದು ತಿಳಿಸಿದ್ದಾರೆ.

ಹೊರಗಿನಿಂದ ಬಂದವರು ಯಾರು? ಯಾಕೆ?

ರಾಗಿಗುಡ್ಡದಲ್ಲಿ ಪದೇ ಪದೆ ಈ ರೀತಿಯ ಘಟನೆಗಳು ನಡೆಯುತ್ತಿದ್ದು, ಶಾಶ್ವತ ಪರಿಹಾರ ಕಂಡು ಹಿಡಿಯಬೇಕಿದೆ. ಪೊಲೀಸರ ವಾಹನ‌ ನಿಲ್ಲಿಸಿಕೊಂಡು ಹಬ್ಬ ಆಚರಣೆ ಮಾಡುವಂತಾಗಬಾರದು. ತಪ್ಪು ಮಾಹಿತಿ ಹಾಗೂ ವದಂತಿಗಳಿಗೆ ಯಾರು ಕಿವಿಗೊಡಬಾರದು. ಹೊರಗಿನಿಂದ ಬಂದವರು ಯಾರು? ಯಾಕೆ? ಎಂಬುದು ತಿಳಿಯಬೇಕು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮವಾಗಬೇಕು ಎಂದು ಆಗ್ರಹಿಸಿದ್ದಾರೆ.

Exit mobile version