Site icon PowerTV

ಡಿ.ಕೆ ಶಿವಕುಮಾರ್​ಗೆ ಕನ್ನಡ ಬರುತ್ತಾ? : ಕುಮಾರಸ್ವಾಮಿ ಆಕ್ರೋಶ

ಬೆಂಗಳೂರು : ಡಿ.ಕೆ. ಶಿವಕುಮಾರ್​ ಅವರಿಗೆ ಕನ್ನಡ ಬರುತ್ತಾ? ನಮ್ಮ‌ ಪಂಚರತ್ನ ಯೋಜನೆ ಘೋಷಣೆ ಜಾರಿ ಆಗದಿದ್ದರೆ ಪಕ್ಷ ವಿಸರ್ಜನೆ ಮಾಡ್ತೇವೆ ಅಂದಿದ್ದೇವು. ಮೊದಲು ನಮ್ಮ ಹೇಳಿಕೆಯನ್ನು ಅರ್ಥ ಮಾಡಿಕೊಳ್ಳಲಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್​.ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಅವರನ್ನು ಹೆದರಿಸಲು ಆಗುತ್ತಾ? ಅವರ ಬಗ್ಗೆ ಜನರಿಗೆ ಗೊತ್ತಿಲ್ವಾ? ಡಿಕೆಶಿ ಅವ್ರು ಯಾರಿಗೆ ಹೆದರುತ್ತಾರೆ? ಯಾವಾಗ ಬೇಕಾದರೂ ದರೋಡೆ ಮಾಡುತ್ತಾರೆ. ಯಾವ ಜಾಗಕ್ಕೆ ಬೇಲಿ ಹಾಕ್ತಾರೆ ಗೊತ್ತು ನಮಗೆ ಎಂದು ಡಿಕೆಶಿ ಬಗ್ಗೆ ಲೇವಡಿ‌ ಮಾಡಿದರು.

ಇಬ್ರಾಹಿಂ ಅವ್ರೇ ನಮ್ಮ ಪಕ್ಷಕ್ಕೆ ಬಂದಿದ್ದು

ಸಿಎಂ ಇಬ್ರಾಹಿಂ ಅವರನ್ನು ಹೆಚ್.ಡಿ.ಕುಮಾರಸ್ವಾಮಿ ನಮ್ಮ ಪಕ್ಷದಿಂದ ಕರೆದುಕೊಂಡು ಹೋದ್ರು ಎಂಬ ಡಿಕೆಶಿ ಹೇಳಿಕೆಗೆ ಹೆಚ್​ಡಿಕೆ ತಿರುಗೇಟು ಕೊಟ್ಟಿದ್ದಾರೆ. ಸಿ.ಎಂ. ಇಬ್ರಾಹಿಂ ಅವರನ್ನು ‌ನಾವು ಕರೆದುಕೊಂಡು ಹೋಗಿಲ್ಲ, ಅವರೇ ನಮ್ಮ ಪಕ್ಷಕ್ಕೆ ಬಂದಿದ್ದು. ಪಕ್ಷಕ್ಕೆ ಬಂದ ಅವರಿಗೆ ಅಧ್ಯಕ್ಷ ಸ್ಥಾನ ಕೊಟ್ಟಿದ್ದೇವೆ ಎಂದು ಡಿ.ಕೆ. ಶಿವಕುಮಾರ್ ವಿರುದ್ಧ ಆಕ್ರೋಶ ಹೊರಹಾಕಿದರು.

Exit mobile version