Site icon PowerTV

ಬರ್ತ್​ಡೇಗೆ ಪಾರ್ಟಿಯಲ್ಲಿ ಬಲೂನ್ ಬ್ಲಾಸ್ಟ್ : ಮೂವರು ಮಕ್ಕಳು ಸೇರಿ ನಾಲ್ವರ ಸ್ಥಿತಿ ಗಂಭೀರ

ಬೆಂಗಳೂರು : ಹುಟ್ಟುಹಬ್ಬಕ್ಕೆಂದು ತಂದು ಅಳವಡಿಸಿದ್ದ ಹೀಲಿಯಂ ಬಲೂನ್ ಬ್ಲಾಸ್ಟ್ ಆಗಿ ಮೂವರು ಮಕ್ಕಳು ಸೇರಿದಂತೆ ನಾಲ್ವರು ಗಂಭೀರ ಗಾಯಗೊಂಡಿರುವ ಘಟನೆ ಬೆಂಗಳೂರಿನ ಕಾಡುಗೋಡಿ ಬಳಿಯ ಬೆಲತ್ತೂರಿನಲ್ಲಿ ನಡೆದಿದೆ.

ವಿಜಯ್ ಕುಮಾರ್ (44), ಧ್ಯಾನ್(7), ಸಂಜಯ್(8) ಹಾಗೂ ಸೋಹಿಲಾ (3) ಗಾಯಗೊಂಡಿದ್ದಾರೆ. ಕೈ ಕಾಲು ಮುಖದ ಭಾಗಗಳು ಸುಟ್ಟು ಹೋಗಿದ್ದು, ಚರ್ಮವು ಸುಟ್ಟು ಹೋಗಿದೆ. ನಿನ್ನೆ ಹುಟ್ಟಹಬ್ಬದ ಆಚರಣೆ ವೇಳೆ ಘಟನೆ ಸಂಭವಿಸಿದೆ.

ಮಗನ ಹುಟ್ಟುಹಬ್ಬದ‌ ಪ್ರಯುಕ್ತ ಹಿಲೇನಿಯಮ್ ಗ್ಯಾಸ್ ತುಂಬಿಸಿದ್ದ ಬಲೂನ್ ಬಳಸಲಾಗಿತ್ತು. ಆದರೆ, ಈ ವೇಳೆ ಕೇಕ್ ಕತ್ತರಿಸುವ ಮುನ್ನ ಕ್ಯಾಂಡಲ್‌ ಹಚ್ಚಲು ಲೈಟರ್‌ ಹಚ್ಚಿದ ತಕ್ಷಣವೇ ಪಕ್ಕದಲ್ಲಿದ್ದ ಹೀಲಿಯಂ ಬಲೂನ್‌ಗಳು ಬ್ಲಾಸ್ಟ್‌ ಆಗಿವೆ.

ವಿಕ್ಟೋರಿಯಾದಲ್ಲಿ ಮಕ್ಕಳಿಗೆ ಚಿಕಿತ್ಸೆ

ಗಾಯಾಳುಗಳಿಗೆ ವಿಕ್ಟೋರಿಯಾ ಬರ್ನಿಂಗ್ ವಾರ್ಡ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಆಸ್ಪತ್ರೆಯಲ್ಲಿ ಗಾಯಾಳುಗಳಲ್ಲಿ ಇಬ್ಬರು ಮಕ್ಕಳಿಗೆ ದೇಹದ ಮೇಲಿನ ಶೇ.30ಕ್ಕೂ ಹೆಚ್ಚು ಭಾಗದ ಚರ್ಮವು ಸುಟ್ಟಿದ್ದು, ಚಿಕಿತ್ಸೆ ಮುಂದುವರೆಸಲಾಗುತ್ತಿದೆ. ಕಾಡುಗೋಡಿ ಠಾಣೆ ಪೊಲೀಸರು ಸ್ಥಳ ಭೇಟಿ ಮಾಡಿ ಮಾಹಿತಿ ಪಡೆದುಕೊಂಡಿದ್ದಾರೆ.

Exit mobile version