Site icon PowerTV

ನಾನೇ ಮುಂದಿನ ಪ್ರಧಾನಿ : ನರೇಂದ್ರ ಮೋದಿ

ನವದೆಹಲಿ : ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನಾವು ಗೆದ್ದು ಮೂರನೇ ಬಾರಿ ಅಧಿಕಾರಕ್ಕೆ ಬರುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನವದೆಹಲಿಯಲ್ಲಿ ದೇಶಾದ್ಯಂತ 100 ಮಹತ್ವಾಕಾಂಕ್ಷಿಯ ವಲಯ ಅಭಿವೃದ್ಧಿ ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿದ್ದಾರೆ.

ಈ ಜಿಲ್ಲೆಗಳ ಸಾಫಲ್ಯತೆ ಮರುಪರಿಶೀಲಿಸಲು ಮುಂದಿನ ವರ್ಷ ಅಕ್ಟೋಬರ್ ಅಥವಾ ನವೆಂಬರ್​ ತಿಂಗಳಲ್ಲಿ ಮತ್ತೆ ನಾನು ಬರುತ್ತೇನೆ ಎಂದು ಹೇಳಿದ್ದಾರೆ. ಈ ಮೂಲಕ 2024ರಲ್ಲಿ ಮತ್ತೆ ಅಧಿಕಾರಕ್ಕೆ ಬರುವೆ, ನಾನೇ ದೇಶದ ಮುಂದಿನ ಪ್ರಧಾನಿ ಎಂದು ಮೋದಿ ಪರೋಕ್ಷವಾಗಿ ತಿಳಿಸಿದ್ದಾರೆ.

ಭಾರತವು ತನ್ನ ಹಿತಾಸಕ್ತಿಗಳನ್ನು ಎಲ್ಲರ ಹಿತಾಸಕ್ತಿಗಳೊಂದಿಗೆ ಹೊಂದಿಕೊಂಡಿದೆ ಎಂದು ನೋಡುತ್ತದೆ. ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಮತ್ತು ಸಬ್ ಕಾ ಪ್ರಯತ್ನ, ಇದು ನಮ್ಮ ದೇಶೀಯ ಆಡಳಿತದ ಆಧಾರವಾಗಿದೆ ಮತ್ತು ಇದು ಜಾಗತಿಕ ಆಡಳಿತದ ದೃಷ್ಟಿಕೋನವೂ ಆಗಿದೆ ಎಂದು ಹೇಳಿದ್ದಾರೆ.

Exit mobile version