Site icon PowerTV

ಸರ್ಕಾರ ಬೀಳಿಸಲು 45 ಜನ ರಾಜೀನಾಮೆ ಕೊಡಬೇಕು : ಲಕ್ಷ್ಮಣ ಸವದಿ

ಬೆಳಗಾವಿ : ಆರು ತಿಂಗಳೊಳಗಾಗಿ ಕಾಂಗ್ರೆಸ್​ ಸರ್ಕಾರ ಬೀಳುತ್ತದೆ ಎಂಬ ಮಾಜಿ ಮುಖ್ಯಮಂತ್ರಿ ಹೆಚ್​.ಡಿ. ಕುಮಾರಸ್ವಾಮಿ ಹೇಳಿಕೆಗೆ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ತಿರುಗೇಟು ನೀಡಿದ್ದಾರೆ.

ಚಿಕ್ಕೋಡಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಬೀಳುವ ಹಗಲು ಕನಸು ಯಾರೇ‌ ಕಂಡರೂ‌ ಅದು ಸಾಧ್ಯವಾಗಲ್ಲ‌. ಸರ್ಕಾರ ಬೀಳಿಸಲು 45 ಜನ ರಾಜೀನಾಮೆ ಕೊಡಬೇಕು. ಅಂತಹ ಪರಿಸ್ಥಿತಿ ರಾಜ್ಯದಲ್ಲಿ ಬರುವುದಿಲ್ಲ. ಆ ರೀತಿ ಸ್ಥಿತಿ ಬಂದರೆ ರಾಜ್ಯದ ಜನರು ಸುಮ್ಮನೆ ಬಿಡುವುದಿಲ್ಲ ಎಂದು ತಿಳಿಸಿದ್ದಾರೆ.

ಸುಭದ್ರ ಸರ್ಕಾರಕ್ಕೆ ರಾಜ್ಯದ ಜನ ಮತ ಹಾಕಿ 135 ಜನರನ್ನು ಆಯ್ಕೆ ಮಾಡಿ ಕಳುಹಿಸಿದ್ದಾರೆ. ಜನತೆ ಎಲ್ಲ ಪಕ್ಷಗಳನ್ನು ಬದಿಗೊತ್ತಿ ಕಾಂಗ್ರೆಸ್​ಗೆ ಬಹುಮತ ಕೊಟ್ಟಿದ್ದಾರೆ. ಕುಮಾರಸ್ವಾಮಿಗಳು ಹೀಗೆ ಹೇಳಲಿಕ್ಕೆ ಒಂದು ದೊಡ್ಡ ಕಾರಣವಿದೆ. ಕುಮಾರಸ್ವಾಮಿ ಅವರ ಪಕ್ಷದ ಮುಖಂಡರು, ಶಾಸಕರು ಬೇರೆ ಪಕ್ಷದ ಕವಲು ದಾರಿಯಲ್ಲಿದ್ದಾರೆ ಎಂದು ಹೇಳಿದ್ದಾರೆ.

ನಾವು ಐದು ವರ್ಷ ಪೂರೈಸುತ್ತೇವೆ

ಬಿಜೆಪಿ ಜೊತೆಗಿನ ಹೊಂದಾಣಿಕೆಯಿಂದ ಅನೇಕ ನಾಯಕರು ಜೆಡಿಎಸ್ ಪಕ್ಷ ತೊರೆಯುತ್ತಿದ್ದಾರೆ. ಬಿಜೆಪಿ ಹಾಗೂ ಜೆಡಿಎಸ್ ಚುನಾವಣೆ ಹೊಂದಾಣಿಕೆಯನ್ನು ಒಪ್ಪದೆ ಹೊರ ನಡೆಯುತ್ತಿದ್ದಾರೆ. ಪಕ್ಷ ಬಿಟ್ಟು ಹೊರ ಹೋಗುವವರನ್ನು ಉಳಿಸಿಕೊಳ್ಳಲು ಕುಮಾರಣ್ಣ ಈ ರೀತಿ ಹೇಳುತ್ತಿದ್ದಾರೆ. ಕಠಿಣ ಸಂದರ್ಭ ಬಂದರೂ ಕೂಡ ನಾವು ಐದು ವರ್ಷ ಪೂರೈಸುತ್ತೇವೆ ಎಂದು ಲಕ್ಷ್ಮಣ ಸವದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Exit mobile version