Site icon PowerTV

ಶಾಮನೂರು ಶಿವಶಂಕರಪ್ಪ ಪರ ವಿಜಯೇಂದ್ರ ಬ್ಯಾಟ್

ಬಳ್ಳಾರಿ : ಕಾಂಗ್ರೆಸ್ ಸರ್ಕಾರದಲ್ಲಿ ಲಿಂಗಾಯಿತ ಸಮುದಾಯ ಕಡಗಣನೆ ಮಾಡಲಾಗುತ್ತಿದೆ ಎಂದಿರುವ ಕಾಂಗ್ರೆಸ್ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಹೇಳಿಕೆಗೆ ವಿಜಯೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ.

ಬಳ್ಳಾರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಶಾಮನೂರು ಶಿವಶಂಕ್ರಪ್ಪ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು. ಶಿವಶಂಕರಪ್ಪ ಹೇಳಿಕೆ ಕೊಟ್ಟಿದ್ದಾರೆ ಅಂದ್ರೆ ಅದರಲ್ಲಿ ಉದ್ದೇಶ ಇರುತ್ತದೆ ಎಂದು ಹೇಳಿದ್ದಾರೆ.

ಶಿವಶಂಕರಪ್ಪ ಅವರು ಸುಮ್ಮನೆ ಹೇಳಿಕೆ ಕೊಡೋರು ಅಲ್ಲ, ಅವರು ಹಿರಿಯರು ಇದ್ದಾರೆ. ಹೀಗಾಗಿ, ಕಾಂಗ್ರೆಸ್ ಪಕ್ಷದಲ್ಲಿ ಏನಾಗುತ್ತಿದೆ ಎಂಬ ವಿಚಾರ ನಂಗೆ ಗೊತ್ತಿಲ್ಲ. ಕಾಂಗ್ರೆಸ್ ಸರ್ಕಾರದಲ್ಲಿ ಲಿಂಗಾಯಿತ ಅಧಿಕಾರಿಗಳನ್ನ ಕಡೆಗಣನೆ ಆಗುತ್ತದೆ. ಈ ವಿಚಾರ ಕುರಿತಾಗಿ ನೀವು ಕಾಂಗ್ರೆಸ್ ನವರನ್ನ ಕೇಳಿ. ನಾನು ಬಿಜೆಪಿ ರಾಜ್ಯ ಉಪಾಧ್ಯಕ್ಷನಾಗಿ ಏನನ್ನು ಹೇಳೊದಿಲ್ಲ ಎಂದು ಜಾಣ್ಮೆಯ ಉತ್ತರ ನೀಡಿದ್ದಾರೆ.

ಶಾಮನೂರು ಶಿವಶಂಕರಪ್ಪನವರು ಸತ್ಯಾಸತೆ ಬಗ್ಗೆ ಮಾತನಾಡುತ್ತಾರೆ. ಯಾವಾಗಲೂ ಸತ್ಯದ ಪರ ಧ್ವನಿ ಎತ್ತುತ್ತಾರೆ. ಹೀಗಾಗಿ, ಕಾಂಗ್ರೆಸ್ ನಲ್ಲಿ ಏನಾಗುತ್ತೆ ಅನ್ನೊದನ್ನ ನಾನು ಚೆರ್ಚೆ ಮಾಡೋದಿಲ್ಲ. ಆ ವಿಚಾರ ಅವರಿಗೆ ಕೇಳಿ ನೀವು ಎಂದು ಶಾಮನೂರು ಶಿವಶಂಕರಪ್ಪ ಕಡೆ ಬೊಟ್ಟು ಮಾಡಿದ್ದಾರೆ.

Exit mobile version