Site icon PowerTV

ನೀನು ಪ್ರೀತಿಸಿದವನನ್ನೇ ಮದುವೆ ಆಗುವುದಿದ್ದರೆ ಮನೆಯವರನ್ನೆಲ್ಲ ಒಪ್ಪಿಸಬಹುದಿತ್ತು : ಚಾಮರಾಜೇಶ್ವರಸ್ವಾಮಿಗೆ ಬಂದವು ವಿಚಿತ್ರ ಕೋರಿಕೆ ಪತ್ರಗಳು!

ಚಾಮರಾಜನಗರ : ದೇವರ ಬಳಿ ಬರುವ ಭಕ್ತರು ಕಷ್ಟ ಪರಿಹಾರ ಮಾಡು, ಸುಖ-ಸಮೃದ್ದಿ ಕರುಣಿಸು ಅಂತ ಬೇಡಿಕೊಳ್ಳೋದು ಮಾಮೂಲಿ. ಆದರೆ, ಚಾಮರಾಜನಗರ ಚಾಮರಾಜೇಶ್ವರಸ್ವಾಮಿ ದೇವಸ್ಥಾನದ ಹುಂಡಿ ಎಣಿಕೆ ವೇಳೆ ವಿಚಿತ್ರ ಕೋರಿಕೆ ಪತ್ರಗಳು ಸಿಕ್ಕಿವೆ.

ದೇವರೆ ನಾನು ಏನು ಮಾಡುತ್ತಿದ್ದೇನೆ ಅಂತ ಗೊತ್ತಿಲ್ಲ. ಆದರೆ, ತುಂಬಾ ತಪ್ಪು ಮಾಡುತ್ತಿದ್ದೇನೆ. ಇದಕ್ಕೆಲ್ಲಾ ನೀನೆ ಪರಿಹಾರ ನೀಡಬೇಕು. ದೇವರೇ ನನ್ನೆಲ್ಲಾ ಗೊಂದಲಗಳಿಗೆ ಪರಿಹಾರ ನೀಡು. ಇನ್ಮುಂದೆ ಆ ರೀತಿ ಗೊಂದಲ ಆಗದಂತೆ ನೋಡಿಕೋ ಎಂದು ಭಕ್ತನೊರ್ವ ಬರೆದಿರುವ ಕೋರಿಕೆ ಪತ್ರ ಬರೆದಿದ್ದಾನೆ.

ಹಾಯ್ ಪುಟ್ಟ.. ಹೇಗಿದದ್ದೀಯ, ನೀನು ನಮ್ಮನ್ನು ಮಿಸ್ ಮಾಡ್ಕೋತಿದಿಯಾ, ನೀನು ಹೀಗೆಲ್ಲ ಮಾಡಬಾರದಿತ್ತು ಎಂದು ಪ್ರೀತಿಸಿದ ಯುವಕನ ಜೊತೆ ಓಡಿ ಹೋದ ಬೆಸ್ಟ್ ಫ್ರೆಂಡ್​ಗೆ ಸ್ನೇಹಿತ ಪತ್ರ ಬರೆದಿದ್ದಾನೆ. ನೀನು ಪ್ರೀತಿಸಿದವನನ್ನೇ ಮದುವೆ ಆಗುವುದಿದ್ದರೆ ಮನೆಯವರನ್ನೆಲ್ಲ ಒಪ್ಪಿಸಬಹುದಿತ್ತು. ದೊಡ್ಡ ತಪ್ಪು ಮಾಡಿಬಿಟ್ಟೆ ಎಂದು ಬರೆದಿರುವ ಪತ್ರ ಸಿಕ್ಕಿದೆ.

ಅನಿತಾ, ಮಧುಶ್ರೀ, ರಾಧಾ ತೊಂದ್ರೆ ಕೊಡಬಾರದು

ಏಪ್ರಿಲ್ 9 (09-04-2023) ರಂದು ಬಂಡಿಪುರಕ್ಕೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿಸು ದೇವರೇ ಎಂದು ಇನ್ನೊಬ್ಬ ಭಕ್ತ ಬರೆದಿದ್ದ ಪತ್ರ ಪ್ರತ್ಯಕ್ಷವಾಗಿದೆ. ಕುಮಾರ್, ನೀಲಮ್ಮ, ಅನಿತಾ, ಧರ್ಮ, ಮಧುಶ್ರೀ, ರಾಧಾ ಇವರೆಲ್ಲ ನಮಗೆ ತೊಂದರೆ ಕೊಡಬಾರದು. ಕೃಷ್ಣಯ್ಯ, ಚೆನ್ನಂಜ ಮಾಸ್ಟರ್, ಮಹದೇವ, ಚಿನ್ನಸ್ವಾಮಿ ಇವರೆಲ್ಲ ನಮ್ಮ ಪರವಾಗಿ ಮಾತನಾಡುವಂತೆ ಮಾಡಬೇಕು. ನಮ್ಮ ಜಾಗ ನಮಗೆ ದೊರಕುವಂತೆ ಎಲ್ಲರೂ ನಮ್ಮ ಪರ ಮಾತನಾಡಬೇಕು. ನಮ್ಮ ಜಾಗ ನಮಗೆ ದೊರಕಿ ಮನೆಯನ್ನು ಕಟ್ಟುವಂತೆ ಮಾಡಬೇಕು ಎಂದು ಮತ್ತೊಬ್ಬ ಭಕ್ತ ದೇವರಿಗೆ ಕೋರಿಕೆ ಪತ್ರ ಬರೆದಿದ್ದಾನೆ.

Exit mobile version